Select Your Language

Notifications

webdunia
webdunia
webdunia
webdunia

ಶಿವಣ್ಣ ಮನೆಯ ಮುದ್ದಿನ ನಾಯಿ ನೀಮೋ ನಿಧನ: ಕಂಬನಿ ಮಿಡಿದ ಗೀತಾ ಶಿವರಾಜ್‌ಕುಮಾರ್

Hattrick Hero Sivarajkumar

Sampriya

ಬೆಂಗಳೂರು , ಶನಿವಾರ, 28 ಡಿಸೆಂಬರ್ 2024 (18:42 IST)
Photo Courtesy X
ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್ ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿಯಲ್ಲಿದ್ದಾರೆ. ಈ ಹೊತ್ತಿನಲ್ಲೇ ಅವರ ಮನೆಯ ಮುದ್ದಿನ ನಾಯಿ ನೀಮೋ ಮೃತಪಟ್ಟಿದೆ.

ಶಿವಣ್ಣ ಅವರ ಹಿರಿಯ ಪುತ್ರಿ ನಿರುಪಮಾ ಅವರ ಪತಿ ಮದುವೆಗೆ ಮೊದಲು ಆ ನಾಯಿಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ನಿರುಪಮಾ ಅವರು ವೈದ್ಯೆ ಆಗಿರುವ ಕಾರಣಕ್ಕೆ ಅದನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಲು ಆಗೋದಿಲ್ಲ ಎಂಬ ಕಾರಣಕ್ಕೆ ಅದು ಶಿವಣ್ಣ ಅವರ ಮನೆಯಲ್ಲೇ ಇತ್ತು. ಆದ್ರೆ ಇಂದು ನಾಯಿ ʻನೀಮೋʼ ಚಿರನಿದ್ರೆಗೆ ಜಾರಿದೆ.

ಈ ಬಗ್ಗೆ ಅಮೆರಿಕದಲ್ಲಿರುವ ಗೀತಾ ಶಿವರಾಜ್‌ಕುಮಾರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರವೊಂದನ್ನು ಬರೆದು ಪೋಸ್ಟ್‌ ಮಾಡಿ ಕಂಬನಿ ಮಿಡಿದಿದ್ದಾರೆ.

ನಟ ಶಿವಣ್ಣ ಅವರು ಕಳೆದ ವಾರ ಅಮೆರಿಕಾಗೆ ಚಿಕಿತ್ಸೆಗೆ ಹೊರಡುವ ವೇಳೆ ನೀಮೋ ಅವರ ಜೊತೆಯಲ್ಲೇ ಇದ್ದು ಬೀಳ್ಕೊಟ್ಟಿದೆ. ಆದರೆ, ಅಲ್ಲಿ ಶಿವಣ್ಣ ಅವರು ಸರ್ಜರಿ ಮುಗಿಸಿಕೊಂಡು ವಿಶ್ರಾಂತಿಯಲ್ಲಿ ಇರುವಾಗ ನೀಮೋ ಮೃತಪಟ್ಟಿದೆ.

ಆ ನಾಯಿ ಬಗ್ಗೆ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಎಲ್ಲರಿಗೂ ಬಹಳಷ್ಟು ಅಟ್ಯಾಚ್‌ಮೆಂಟ್ ಇತ್ತು ಎಂಬುದು ಗೀತಾ ಅವರ ಪತ್ರದಿಂದ ಗೊತ್ತಾಗಿದೆ. ಆ ಪತ್ರದಲ್ಲಿ ಆ ನಾಯಿ ನೀಮೋ ಮನೆಯಲ್ಲಿ ಹೇಗಿರುತ್ತಿತ್ತು, ಗೀತಾ ಅವರನ್ನು ಅದೆಷ್ಟು ಇಷ್ಟಪಡುತ್ತಿತ್ತು ಎಂಬ ಗೀತಾ ಅವರು ಬರೆದುಕೊಂಡಿದ್ದಾರೆ. ತಮ್ಮ ಮನೆಯ ಸದಸ್ಯರೊಬ್ಬರನ್ನು ಕಳೆದುಕೊಂಡಂತಾ ದುಃಖವಾಗಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರಾಠಿ ನಟಿ ಊರ್ಮಿಳಾ ಕೊಠಾರೆ ಕಾರು ಹರಿದು ಕಾರ್ಮಿಕ ಸಾವು, ಮತ್ತೊಬ್ಬ ಗಂಭೀರ