Select Your Language

Notifications

webdunia
webdunia
webdunia
webdunia

ತೀವ್ರ ಸುಸ್ತು: ನಟ ಶಿವರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲು

ತೀವ್ರ ಸುಸ್ತು: ನಟ ಶಿವರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲು

Sampriya

ಬೆಂಗಳೂರು , ಸೋಮವಾರ, 1 ಏಪ್ರಿಲ್ 2024 (18:04 IST)
photo Courtesy Instagram
ಬೆಂಗಳೂರು: ಲೋಸಕಭಾ ಚುನಾವಣೆಯ ಪ್ರಚಾರ ಮತ್ತು ಸತತ ಚಿತ್ರೀಕರಣದಿಂದಾಗಿ ಸುಸ್ತಾಗಿದ್ದ ನಟ ಶಿವರಾಜ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್‌ಕುಮಾರ್‌ಗೆ ಕೆಲವು ಪರೀಕ್ಷೆಗಳನ್ನ ಮಾಡಿಸಲಾಗಿದೆ. ಇಂದು ಶೂಟಿಂಗ್ ಸೆಟ್ ನಲ್ಲಿ ಬಹಳಷ್ಟು ಧೂಳು ಆವರಿಸಿ ಮತ್ತೆ ಸುಸ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಚಿಕಿತ್ಸೆ ಪಡೆದು ನಾಳೆ ಬೆಳಿಗ್ಗೆ ಮನೆಗೆ ತೆರಳಲಿದ್ದಾರೆ ಶಿವರಾಜ್ ಕುಮಾರ್. ಚಿಕಿತ್ಸೆ ನಂತರ ಶಿವರಾಜ್ ಕುಮಾರ್ ಆರಾಮಾಗಿದ್ದಾರೆ. ಯಾವುದೇ ಆತಂಕ ಪಡುವಂಥದ್ದು ಇಲ್ಲ ಎಂದಿದ್ದಾರೆ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಲೋಕಸಭೆ ಚುನಾವಣೆಯ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ  ಪತ್ನಿ ಗೀತಾ ಪರ ಶಿವರಾಜ್‌ಕುಮಾರ್  ಪ್ರಚಾರ ಕೈಗೊಂಡಿದ್ದರು. ಚುನಾವಣೆಯಲ್ಲಿ ಪತ್ನಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಹೇಳಿ, ಈಚೆಗೆ ಶಿವಮೊಗ್ಗದಲ್ಲಿ ದಂಪತಿ ಸಮೇತ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

‌ಲವ್‌ನಲ್ಲಿ ಬಿದ್ದ ಪೂಜಾ ಹೆಗ್ಡೆ: ಬಾಲಿವುಡ್ ನಟನ ಜತೆ ಕರಾವಳಿ ಬೆಡಗಿ ಸುತ್ತಾಟ