Select Your Language

Notifications

webdunia
webdunia
webdunia
webdunia

ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡ್ತಾರಾ?

ಗೀತಾ ಶಿವರಾಜ್‌ಕುಮಾರ್

geetha

bangalore , ಭಾನುವಾರ, 3 ಮಾರ್ಚ್ 2024 (17:02 IST)
ಬೆಂಗಳೂರು- ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಈ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಮಗಳು. ರಕ್ತದಲ್ಲೇ ರಾಜಕಾರಣವಿಟ್ಟುಕೊಂಡು ಬಂದ ಅವರು ಈಗಲೂ ದೊಡ್ಮನೆಯ ಏಕೈಕ ರಾಜಕಾರಣಿ. ಜೆಡಿಎಸ್‌ ಪಕ್ಷದಲ್ಲಿದ್ದ ಅವರು ಈಗ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇನ್ನೇನು ಲೋಕಸಭ ಚುನಾವಣೆ ಹತ್ತಿರ ಬರುತ್ತಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಂಭವವಿದೆ ಇದಕ್ಕೆ ಶಿವಣ್ಣ ಕೂಡ ಸುಳಿವು ನೀಡಿದ್ದಾರೆ.ಕಾಂಗ್ರೆಸ್ ಪಕ್ಷದ ಪರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಹಿರಂಗವಾಗಿ ಟಿಕೆಟ್ ನೀಡುವುದಾಗಿ ಘೋಷಿಸಿದರೂ ಕೂಡ ಅದನ್ನು ನಯವಾಗಿಯೇ ನಿರಾಕರಿಸಿದವರು ಶಿವಣ್ಣ. 

ಇನ್ನೂ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ಶಿವರಾಜ್ ಕುಮಾರ್ ತಾವು ರಾಜಕಾರಣಕ್ಕೆ ಬರದಿದ್ದರೂ ಕೂಡ ತಮ್ಮ ಪತ್ನಿಯನ್ನು ರಾಜಕೀಯವಾಗಿ ಬೆಳೆಸುತ್ತೇನೆ. ಈ ಹಿಂದೆ ಜೆಡಿಎಸ್​ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಅವರ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ಕೂಡ ಮಾಡಿದ್ದರು. ಆದರೆ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದರು. ಈಗ ಕಾಂಗ್ರೆಸ್ ಪಕ್ಷ ಸೇರಿರುವ ಅವರು ಮತ್ತೆ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ.
 
ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗೆದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಉಹಾಪೋಹಗಳ ನಡುವೆಯೇ, 'ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದು ಶಿವಣ್ಣ ತಿಳಿಸಿದ್ದಾರೆ. ಹೀಗಾಗಿ ಶಿವಮೊಗ್ಗದಿಂದ ದೊಡ್ಮನೆ ಸಿಸೆ ಕನ್ಖಕ್ಕೆ ಇಳಿಯುವುದು ಪಕ್ಕಾ ಎನ್ನಲಾಗಿದೆ.ಗೀತಾ ಶಿವರಾಜ್‌ಕುಮಾರ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಪಕ್ಕ ಆಗಿದೆ. ಶಿವರಾಜ್‌ಕುಮಾರ್ ರಾಜಕೀಯಕ್ಕೆ ಬರದ ಕಾರಣ, ದೊಡ್ಮನೆ ಕುಟುಂಬದಿಂದ ಒಬ್ಬರನ್ನು ಚುನಾವಣೆಗ ಇಳಿಸಲು ಚಿಂತಿಸುತ್ತಿದ್ದು, ಎಸ್ ಬಂಗಾರಪ್ಪ ಅವರ ಹಿಡಿತವಿದ್ದ ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎನ್‌ಎಚ್‌ಎಐ ಪ್ರಧಾನ ವ್ಯವಸ್ಥಾಪಕನ ಬಂಧನ ಮಾಡಿದ ಸಿಬಿಐ