Publish Date: Fri, 28 Apr 2023 (17:32 IST)
Updated Date: Fri, 28 Apr 2023 (17:33 IST)
ಬೆಂಗಳೂರು: ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಗೀತಾಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಅಧಿಕೃತವಾಗಿ ಸ್ವಾಗತಿಸಲಾಯಿತು. ಆದರೆ ಈ ವೇಳೆ ನಟ ಶಿವರಾಜ್ ಕುಮಾರ್ ಗೈರಾಗಿದ್ದರು. ದೊಡ್ಮನೆಯವರು ಮೊದಲೇ ರಾಜಕೀಯಗಳಿಂದ ದೂರವೇ ಇದ್ದವರು. ಹೀಗಾಗಿ ಇಂದೂ ಪಕ್ಷದ ಸಮಾರಂಭದಲ್ಲಿ ಶಿವಣ್ಣ ಗೈರಾಗಿದ್ದರು. ಆದರೆ ಮುಂದೆ ಪತ್ನಿ ಜೊತೆ ಪ್ರಚಾರದಲ್ಲಿ ಕೈ ಜೋಡಿಸುವುದಾಗಿ ಶಿವಣ‍್ಣ ಈಗಾಗಲೇ ಹೇಳಿದ್ದಾರೆ.
ಇನ್ನು, ಗೀತಾ ಶಿವರಾಜ್ ಕುಮಾರ್ ಸಹೋದರ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಅದಲ್ಲದೆ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ.