Select Your Language

Notifications

webdunia
webdunia
webdunia
webdunia

ಮೋದಿಯವರನ್ನು ಸಾವಿನ ಕೂಪಕ್ಕೆ ತಳ್ಳೋ ಆಹ್ವಾನ ನೀಡಿತ್ತು : ಸ್ಮೃತಿ ಇರಾನಿ

ಮೋದಿಯವರನ್ನು ಸಾವಿನ ಕೂಪಕ್ಕೆ ತಳ್ಳೋ ಆಹ್ವಾನ ನೀಡಿತ್ತು : ಸ್ಮೃತಿ ಇರಾನಿ
ಬೆಳಗಾವಿ , ಶುಕ್ರವಾರ, 28 ಏಪ್ರಿಲ್ 2023 (11:14 IST)
ಬೆಳಗಾವಿ : ಕಾಂಗ್ರೆಸ್ ಪಕ್ಷ ಎಂತಹ ನಿರ್ಲಜ್ಜ ಪಕ್ಷವೆಂದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸಾವಿನ ಕೂಪಕ್ಕೆ ತಳ್ಳೋ ಆಹ್ವಾನ ನೀಡಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಬೆಳಗಾವಿಯ ಹಿಂಡಲಗಾದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,

ಈ ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಬಗ್ಗೆ ಅವಹೇಳನ ಮಾಡಿದ್ದ ಪಕ್ಷ. ನರೇಂದ್ರ ಮೋದಿಯವರ ಸ್ವರ್ಗೀಯ ತಂದೆಯವರ ಅಪಮಾನ ಮಾಡಿದ ನಿರ್ಲಜ್ಜ ಪಕ್ಷ ಕಾಂಗ್ರೆಸ್ ಎಂದರು.

ನಾನು ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಹೇಳಬಯಸುತ್ತೇನೆ. ನೀವು ಇಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದೀರಿ. ಆ ರಾಜಕೀಯ ಪಕ್ಷದ ಇತಿಹಾಸ ಹೇಗಿದೆ ಎಂದರೆ ದಲಿತ ನಾಯಕನಾದರೆ ರಾಹುಲ್ ಗಾಂಧಿ ತಮ್ಮ ಚಪ್ಪಲಿ ಅವರಿಂದ ತೆಗೆಸುತ್ತಾರೆ. ದೇಶದಲ್ಲಿ ಮೊದಲ ಬಾರಿ ಆದಿವಾಸಿ ಮಹಿಳೆಗೆ ರಾಷ್ಟ್ರಪತಿ ಅಭ್ಯರ್ಥಿ ಮಾಡಿದರೆ ಅವರ ಬಗ್ಗೆ ಅವಹೇಳನ ಹೇಳಿಕೆ ನೀಡುವಂತ ಪಕ್ಷ ಕಾಂಗ್ರೆಸ್ ಎಂದು ಕಟುವಾಗಿ ಟೀಕಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ್ಯಾವ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಘೋಷಿಸಬೇಕು : ಶೋಭಾ ಕರಂದ್ಲಾಜೆ