Publish Date: Fri, 28 Apr 2023 (10:27 IST)
Updated Date: Fri, 28 Apr 2023 (10:29 IST)
ಶೋಭಾ ಕರಂದ್ಲಾಜೆ ಬರೆದ ಪತ್ರವನ್ನು ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಹಂಚಿಕೊಂಡು, ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆಗಳನ್ನು ಆಯೋಜಿಸುವುದು ಯಾರ ಜವಾಬ್ದಾರಿ? ಚುನಾವಣಾ ಆಯೋಗದ್ದೋ? ಬಿಜೆಪಿಯದ್ದೋ ಎಂದು ಪ್ರಶ್ನಿಸಿದ್ದಾರೆ.
ಯಾವ ಮತಗಟ್ಟೆಯಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಬೇಕು? ವೀಡಿಯೋ ರೆಕಾರ್ಡಿಂಗ್ ಮಾಡಬೇಕು ಎಂಬುದು ನಿರ್ಧರಿಸುವುದು ಚುನಾವಣಾ ಆಯೋಗ ತಾನೆ? ಚುನಾವಣಾ ಪ್ರಕ್ರಿಯೆಯ ಕೆಲಸಗಳನ್ನು ಮಾಡಲು ರಾಜಕೀಯ ಪಕ್ಷಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.