Select Your Language

Notifications

webdunia
webdunia
webdunia
webdunia

‌ಲವ್‌ನಲ್ಲಿ ಬಿದ್ದ ಪೂಜಾ ಹೆಗ್ಡೆ: ಬಾಲಿವುಡ್ ನಟನ ಜತೆ ಕರಾವಳಿ ಬೆಡಗಿ ಸುತ್ತಾಟ

‌ಲವ್‌ನಲ್ಲಿ ಬಿದ್ದ ಪೂಜಾ ಹೆಗ್ಡೆ: ಬಾಲಿವುಡ್ ನಟನ ಜತೆ  ಕರಾವಳಿ ಬೆಡಗಿ ಸುತ್ತಾಟ

Sampriya

ಮುಂಬೈ , ಸೋಮವಾರ, 1 ಏಪ್ರಿಲ್ 2024 (17:36 IST)
Photo Courtesy Facebook
ಮುಂಬೈ: ಚಿತ್ರರಂಗದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ತನ್ನದೇ ಛಾಪನ್ನು ಮೂಡಿಸಿದ್ದಾರೆ. ನೈಜ ಅಭಿನಯ  ಹಾಗೂ ಆಕರ್ಷಕ ಸೌಂದರ್ಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಪೂಜಾ ಬಹು ಬೇಡಿ ನಟಿಯರಲ್ಲಿ ಒಬ್ಬರು.

ಇನ್ನೂ ಬಣ್ಣದ ಲೋಕದಲ್ಲಿರುವವರಿಗೆ ಗಾಸಿಫ್ ಅನ್ನೋದು ತಳುಕು ಹಾಕಿಕೊಂಡೆ ಇರುತ್ತದೆ.  ಕಳೆದ ವರ್ಷ ನಟಿ ಪೂಜಾ ಅವರ ಹೆಸರು ಕ್ರಿಕೆಟಿಗ ಜತೆ ತಳುಕು ಹಾಕಿಕೊಂಡಿತ್ತು.  ಇಬ್ಬರು ಡೇಟಿಂಗ್‌ನಲ್ಲಿದ್ದು, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆಂಬ ಸುದ್ದಿ ಹರಿದಾಡಿತ್ತು.

ಇನ್ನೂ ಈ ಸುದ್ದಿ ಊಹಪೋಹವಾಗಿಯೇ ಉಳಿಯಿತು. ಇದೀಗ ನಟಿ ಬಾಲಿವುಡ್ ನಟ ರೋಹನ್ ಮೆಹ್ರಾ  ಜತೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈಚೆಗೆ ಇವರಿಬ್ಬರು ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯಗಳು ಮತ್ತು ಮುಂಬೈನ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಆಗಾಗ್ಗೆ ಹೋಗುತ್ತಿರುವ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಇನ್ನೂ ರೋಹನ್ ಮೆಹ್ರಾ ಅವರು ತಾರಾ ಸುತಾರಿಯಾ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಸುದ್ದಿಯಿತ್ತು. ಆ ಸಂಬಂಧ ಮುರಿದು ಹೋಯಿತು. ಇದೀಗ ಪೂಜಾ ಹೆಗ್ಡೆ ಅವರೊಂದಿಗೆ ಪ್ರಣಯದಲ್ಲಿ ತೊಡಗಿಸಿಕೊಂಡಿದ್ದು, ಕಾರಿನಲ್ಲಿ ಒಟ್ಟಿಗೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೂಜಾ ಹೆಗ್ಡೆ ಅವರ ಅಭಿಮಾನಿಗಳು ಚಿಂತಿಸುವ ಅವಶ್ಯಕತೆಯಿಲ್ಲ ಯಾಕೆಂದರೆ ರೋಹನ್ ಮೆಹ್ರಾ ಅವರ ಜತೆಗಿನ ಸಂಬಂಧವನ್ನು ಅಧಿಕೃತವಾಗಿ ಇನ್ನೂ ಖಚಿತಪಡಿಸಿಲ್ಲ

Share this Story:

Follow Webdunia kannada

ಮುಂದಿನ ಸುದ್ದಿ

ದಯವಿಟ್ಟು ವಿಡಿಯೋ ಮಾಡಬೇಡಿ: ಪಾಪರಾಜಿಗಳ ಬಳಿ ಸಾರಾ ಅಲಿಖಾನ್ ಮನವಿ