Publish Date: Mon, 01 Apr 2024 (13:14 IST)
Updated Date: Mon, 01 Apr 2024 (13:16 IST)
ಬೆಂಗಳೂರು: ಕಾಟೇರ ಸಕ್ಸಸ್ ಬಳಿಕ ನಗರದ ರೆಸ್ಟೋರೆಂಟ್ ಒಂದರಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದರು ಎಂಬ ಆರೋಪದಲ್ಲಿ ವಿಚಾರಣೆಗೊಳಗಾಗಿದ್ದ ನಟ ದರ್ಶನ್ ಮತ್ತು ಸಂಗಡಿಗರಿಗೆ ಬಿಗ್ ರಿಲೀಫ್ ಸಿಕ್ಕಿದೆ.
;ಪೊಲೀಸರು ಘಟನೆ ಬಗ್ಗೆ ಚಾರ್ಜ್ ಶೀಟ್ ತಯಾರಿಸಿದ್ದು, ಇದರಲ್ಲಿ ದರ್ಶನ್ ಮತ್ತು ಸ್ನೇಹಿತರು ಊಟ ಮಾಡಿದ್ದರಷ್ಟೇ, ಪಾರ್ಟಿ ಮಾಡಿರಲಿಲ್ಲ ಎಂಬ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಇದು ದರ್ಶನ್ ಮತ್ತು ಸ್ನೇಹಿತರಿಗೆ ಬಿಗ್ ರಿಲೀಫ್ ನೀಡಿದೆ.
ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸಿದ್ದರು. ದರ್ಶನ್, ಅಭಿಷೇಕ್ ಅಂಬರೀಸ್, ರಾಕ್ ಲೈನ್ ವೆಂಕಟೇಶ್, ನೀನಾಸಂ ಸತೀಶ್ ಸೇರಿದಂತೆ ರೆಸ್ಟೋರೆಂಟ್ ಗೆ ತೆರಳಿದ್ದ ಎಲ್ಲಾ ಸೆಲೆಬ್ರಿಟಿಗಳು ಖುದ್ದಾಗಿ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದರು.
ಇದೀಗ ಪೊಲೀಸರು ಆರೋಪ ಪಟ್ಟಿ ತಯಾರಿಸಿದ್ದಾರೆ. ಅದರಂತೆ ದರ್ಶನ್ ಮತ್ತು ಸ್ನೇಹಿತರ ಹೇಳಿಕೆ ಉಲ್ಲೇಖಿಸಲಾಗಿದೆ. ಕೇವಲ ಊಟ ಮಾತ್ರ ಮಾಡಿದ್ದಾಗಿ ದರ್ಶನ್ ನೀಡಿದ್ದ ಹೇಳಿಕೆಯನ್ನು ಪೊಲೀಸರು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ದರ್ಶನ ಮತ್ತು ಸ್ನೇಹಿತರಿಗೆ ರಿಲೀಫ್ ಸಿಕ್ಕಂತಾಗಿದೆ.