Select Your Language

Notifications

webdunia
webdunia
webdunia
webdunia

ಗಂಡ,ಹೆಂಡತಿ ಜಗಳವಾಡುವಾಗ ‘ಭೂತ’ ‘ಪಿಶಾಚಿ’ ಎಂದು ಕರೆದರೆ ತಪ್ಪಿಲ್ಲ

Court

Krishnaveni K

ಪಾಟ್ನಾ , ಭಾನುವಾರ, 31 ಮಾರ್ಚ್ 2024 (14:55 IST)
ಪಾಟ್ನಾ: ಗಂಡ-ಹೆಂಡತಿ ಜಗಳವಾಡುವಾಗ ಕೋಪದಿಂದ ಭೂತ, ಪಿಶಾಚಿ ಎಂಬಿತ್ಯಾದಿ ಪದಗಳನ್ನು ಪ್ರಯೋಗಿಸಿದರೆ ಅದು ತಪ್ಪಲ್ಲ ಎಂದು ಪಾಟ್ನಾ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ವಿಚ್ಛೇದಿತ ಪತಿ ಮತ್ತು ಮಾವನ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮಹಿಳೆಯ ದೂರು ವಿಚಾರಣೆ ಮಾಡಿದ್ದ ಕೋರ್ಟ್ ತೀರ್ಪಿನಲ್ಲಿ ಈ ರೀತಿ ಹೇಳಿದೆ. ನರೇಶ್ ಗುಪ್ತಾ ಎಂಬವರ  ವಿರುದ್ಧ ಅವರ ಪತ್ನಿ ಸ್ಥಳೀಯ ನ್ಯಾಯಾಲದಲ್ಲಿ ದೂರು ನೀಡಿದ್ದರು.

ಅದರಂತೆ ಗಂಡ ಮತ್ತು ಮಾವ ಮದುವೆ ಸಮಯದಲ್ಲಿ ಕಾರು ನೀಡಲಿಲ್ಲವೆಂದು ಹಿಂಸಿಸುತ್ತಿದ್ದರು. ಕೆಟ್ಟ ಶಬ್ಧಗಳನ್ನು ಬಳಸುತ್ತಿದ್ದರು ಎಂದು ದೂರಿದ್ದರು. ಅದರಂತೆ 2008 ರಲ್ಲಿ ತಂದೆ-ಮಗನಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ನಡುವೆ ಜಾರ್ಖಂಡ್ ಹೈಕೋರ್ಟ್ ದಂಪತಿಗೆ ವಿಚ್ಛೇದನ ನೀಡಿತ್ತು.

ಕೋರ್ಟ್ ತಮಗೆ ನೀಡಿದ ಶಿಕ್ಷೆ ಪ್ರಶ್ನಿಸಿ ತಂದೆ-ಮಗ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ವೈವಾಹಿಕ ಸಂಬಂಧಗಳಲ್ಲಿ ಅದರಲ್ಲೂ ವಿಶೇಷವಾಗಿ ಮುರಿದ ಸಂಬಂಧಗಳಲ್ಲಿ ಈ ರೀತಿಯ ಪದ ಬಳಕೆ ಸಾಮಾನ್ಯವಾಗಿದೆ. ಇದನ್ನು ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ತೀರ್ಪು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್‌ಡಿಕೆ ಶಸ್ತ್ರಚಿಕಿತ್ಸೆ ಬಗ್ಗೆ ಅನುಮಾನ: ಕೈ ಶಾಸಕನ ಹೇಳಿಕೆಗೆ ತಿರುಗೇಟು ಕೊಟ್ಟ ಡಾ ಮಂಜುನಾಥ್