Publish Date: Wed, 20 Mar 2024 (12:12 IST)
Updated Date: Wed, 20 Mar 2024 (12:16 IST)
ಹೈದರಾಬಾದ್: ರಸ್ತೆ ಬದಿ ಮಾರಾಟ ಮಾಡುವ ಆಹಾರಗಳನ್ನು ಸೇವಿಸುವ ಮೊದಲು ಸಾಕಷ್ಟು ಬಾರಿ ಯೋಚನೆ ಮಾಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಬೀದಿ ಬದಿ ಐಸ್ ಕ್ರೀಂ ಗಾಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿ ತನ್ನ ವೀರ್ಯಾಣುವನ್ನು ಐಸ್ ಕ್ರೀಂಗೆ ತುಂಬಿ ಮಾರಾಟ ಮಾಡುತ್ತಿದ್ದ. ಈ ವಿಕೃತ ಕೃತ್ಯ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ವಾರಂಗಲ್ ಜಿಲ್ಲೆಯಲ್ಲಿ ಈ ವಿಕೃತ ಘಟನೆ ನಡೆದಿದೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವಯರಲ್ ಆಗಿತ್ತು.
ಆರೋಪಿ ವ್ಯಾಪಾರಿ ಕಾಳುರಾಮ್ ಕುರ್ಬಿಯಾ ಎಂದು ಗುರುತಿಸಲಾಗಿದ್ದು ಈತ ರಾಜಸ್ಥಾನ್ ಮೂಲದವನಾಗಿದ್ದಾನೆ. ತನ್ನ ತಳ್ಳುಗಾಡಿಯಲ್ಲಿ ಐಸ್ ಕ್ರೀಂ ಮತ್ತು ಕುಲ್ಫೀ ಮಾರಾಟ ಮಾಡುತ್ತಿದ್ದ. ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದೀಗ ಸಾರ್ವಜನಿಕವಾಗಿ ಅನುಚಿತ ವರ್ತನೆ ಅಡಿಯಲ್ಲಿ ಆತನ ಮೇಲೆ ಕೇಸ್ ದಾಖಲಾಗಿದೆ. ಅಲ್ಲದೆ, ಆಹಾರ ಸುರಕ್ಷಿತಾ ಅಧಿಕಾರಿಗಳು ಆತನ ತಳ್ಳುಗಾಡಿಯ ಆಹಾರವನ್ನು ಪರೀಕ್ಷೆಗಾಗಿ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಈತನ ವರ್ತನೆಗೆ ಜನರು ಛೀಮಾರಿ ಹಾಕಿದ್ದಾರೆ.