Publish Date: Wed, 20 Mar 2024 (11:24 IST)
Updated Date: Wed, 20 Mar 2024 (11:26 IST)
ಲಕ್ನೋ: ಇಬ್ಬರು ಅಪ್ರಾಪ್ತರನ್ನು ಕೊಂದ ನೆರೆಮನೆಯ ಯುವಕರು ಅವರ ರಕ್ತ ಕುಡಿದು ವಿಕೃತಿ ಮೆರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಗಳಲ್ಲಿ ಒಬ್ಬ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಇನ್ನೊಬ್ಬನನ್ನು ಬಂಧಿಸಲಾಗಿದೆ.
12 ಮತ್ತು 6 ವರ್ಷದ ಪುಟಾಣಿ ಬಾಲಕರನ್ನು ತಮ್ಮ ಮನೆಯ ಟೆರೇಸ್ ನಲ್ಲಿ ಆರೋಪಿಗಳು ಕತ್ತು ಸೀಳಿ ಹತ್ಯೆ ಮಾಡಿದ್ದಲ್ಲದೆ, ಅವರ ರಕ್ತ ಕುಡಿದು ವಿಕೃತಿ ಮೆರೆದಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೇ ಆಕ್ರೋಶಗೊಂಡ ಸಾರ್ವಜನಿಕರು ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.
ಆರೋಪಿ ಮೊಹಮ್ಮದ್ ಸಾಜಿದ್ ಬಾರ್ಬರ್ ಶಾಪ್ ಇಟ್ಟುಕೊಂಡಿದ್ದ. ಕೊಲೆಗೀಡಾದ ಮಕ್ಕಳ ನೆರೆಮನೆಯಲ್ಲೇ ವಾಸವಿದ್ದ. ಕೊಲೆಗೀಡಾದ 12 ಮತ್ತು 6 ವರ್ಷದ ಮಕ್ಕಳ ಜೊತೆಗೆ 8 ವರ್ಷದ ಮತ್ತೊಬ್ಬ ಸಹೋದರನನ್ನೂ ಆರೋಪಿ ಸಾಜಿದ್ ಕೊಲೆ ಮಾಡಲು ಯತ್ನಿಸಿದ್ದ. ಆದರೆ ಆತ ಗಾಯಗಳಾಗಿದ್ದರೂ ತಪ್ಪಿಸಿಕೊಂಡಿದ್ದ. ಉಳಿದಿಬ್ಬರು ಸಹೋದರರು ಸಾಜಿದ್ ಕೈಯಲ್ಲಿ ಕ್ರೂರವಾಗಿ ಕೊಲೆಗೀಡಾದರು. ಬಳಿಕ ಇನ್ನೊಬ್ಬ ಆರೋಪಿ ಜೊತೆಗೂಡಿ ಆತ ಕೊಲೆಗೀಡಾದ ಮಕ್ಕಳ ರಕ್ತ ಕುಡಿದು ರಾಕ್ಷಸನಂತೆ ವರ್ತಿಸಿದ್ದ.
ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ರೊಚ್ಚಿಗೆದ್ದ ಜನ ಗಲಾಟೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ಇಬ್ಬರು ಆರೋಪಿಗಳ ಸೆರೆಗೆ ಪ್ರಯತ್ನಿಸಿದ್ದು, ಈ ವೇಳೆ ಓರ್ವ ಪೊಲೀಸರ ಮೇಲೆಯೇ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಪೊಲೀಸರು ಪ್ರತಿದಾಳಿ ಮಾಡಿ ಆತನನ್ನು ಎನ್ ಕೌಂಟರ್ ಮಾಡಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹೇಯ ಕೃತ್ಯಕ್ಕೆ ಇಡೀ ಉತ್ತರ ಪ್ರದೇಶವೇ ಆಕ್ರೋಶಗೊಂಡಿದೆ.