Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೇಶ್ ಕುದುರೆ ಸವಾರಿ ವಿಡಿಯೋ ವೈರಲ್

Vinesh Darshan

Krishnaveni K

ಬೆಂಗಳೂರು , ಭಾನುವಾರ, 31 ಮಾರ್ಚ್ 2024 (16:00 IST)
Photo Courtesy: Darshan fans X page
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೇಶ್ ಅಪ್ಪನಂತೇ ಪ್ರಾಣಿ ಪ್ರಿಯ. ಇದೀಗ ಯಂಗ್ ದರ್ಶನ್ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಕುದುರೆಗಳನ್ನು ಸಾಕುತ್ತಾರೆ. ಅವರ ಮೆಚ್ಚಿನ ಕುದುರೆಯನ್ನು ಈ ಹಿಂದೆ ಸಿನಿಮಾದಲ್ಲೂ ಬಳಸಿಕೊಂಡಿದ್ದರು. ಬಿಡುವು ಸಿಕ್ಕಾಗಲೆಲ್ಲಾ ದರ್ಶನ್ ತೋಟದ ಮನೆಗೆ ಹೋಗಿ ತಮ್ಮ ಮೆಚ್ಚಿನ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ.

ಇತ್ತೀಚೆಗೆ ದರ್ಶನ್ ಗೆ ಪುತ್ರ ವಿನೇಶ್ ಕೂಡಾ ಜೊತೆಯಾಗುತ್ತಿದ್ದಾರೆ. ಇದೀಗ ತಮ್ಮದೇ ಸಾಕು ಕುದುರೆಯ ಮೇಲೆ ಕೂತು ವಿನೇಶ್ ಸವಾರಿ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಕ್ಕಾ ನುರಿತ ಸವಾರನಂತೆ ವಿನೇಶ್ ವೇಗವಾಗಿ ಕುದುರೆ ಓಡಿಸುತ್ತಿದ್ದಾರೆ.

ಕೆಲವು ವರ್ಷದ ಹಿಂದೆ ವಿನೇಶ್ ಕುದುರೆ ಮೇಲೆ ಕೂತಿದ್ದ ವಿಡಿಯೋ ವೈರಲ್ ಆಗಿತ್ತು. ಆಗಿಂದಲೇ ಅವರಿಗೆ ಕುದುರೆ ಸವಾರಿ ಮಾಡುವ ಆಸಕ್ತಿಯಿತ್ತು. ಇದೀಗ ಪಕ್ಕಾ ಪರಿಣಿತರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಮರೆಯಾದ ಜೀವದ ಗೆಳೆಯ: ನಟ ಕಿಶೋರ್ ಭಾವುಕ ನುಡಿ