Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಜನ್ಮದಿನದ ಸಂಭ್ರಮ

Darshan
ಬೆಂಗಳೂರು: ಸ್ಯಾಂಡಲ್ ವುಡ್‍ ನಟ, ಅಭಿಮಾನಿಗಳ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಜನ್ಮದಿನದ ಸಂಭ್ರಮ. ಡಿ ಬಾಸ್ ದರ್ಶನ್ ಈಗ 47 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಲೈಟ್ ಬಾಯ್ ಆಗಿ ಸಿನಿಮಾ ರಂಗ ಪ್ರವೇಶಿಸಿದ ದರ್ಶನ್, ಹಿರಿಯ ನಟ ತೂಗುದೀಪ ಶ್ರೀನಿವಾಸ್ ಮಗನಾಗಿದ್ದರೂ ಅವಕಾಶಕ್ಕಾಗಿ ಕಷ್ಟಪಟ್ಟರು. ಬಳಿಕ ತಮ್ಮದೇ ಸ್ವಂತ ಪರಿಶ್ರಮದಿಂದ ಬೆಳೆದು ಇಂದು ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ರೇಂಜ್ ಗೆ ಬೆಳೆದಿದ್ದಾರೆ.

ಎಂದಿನಂತೇ ಈ ಬಾರಿಯೂ ದರ್ಶನ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆಧರೆ ಅವರ ಹುಟ್ಟುಹಬ್ಬ ನಿಮಿತ್ತ ಅಭಿಮಾನಿಗಳು ಕೇಕ್, ಹಾರ ಹಾಕುವ ಬದಲು ದಿನಸಿ ಸಾಮಾನುಗಳನ್ನು ದೇಣಿಗೆ ನೀಡುತ್ತಿದ್ದಾರೆ. ಇದನ್ನು ಬಡವರಿಗೆ, ಅನಾಥಾಶ್ರಮಗಳಿಗೆ ನೀಡುವುದಾಗಿ ದರ್ಶನ್ ಹೇಳಿದ್ದಾರೆ.

ದರ್ಶನ್ ಹುಟ್ಟುಹಬ್ಬ ನಿಮಿತ್ತ ಇಂದು ಅವರ ಎರಡು ಹೊಸ ಸಿನಿಮಾಗಳ ಅಪ್ ಡೇಟ್ ಸಿಗುತ್ತಿದೆ. ಪ್ರಕಾಶ್ ವೀರ್ ನಿರ್ದೇಶನದ ಸಿನಿಮಾದ ಟೈಟಲ್ ನಿನ್ನೆ ಮಧ‍್ಯರಾತ್ರಿಯೇ ಲಾಂಚ್ ಆಗಿದೆ. ಇನ್ನು, ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾದ ಬಗ್ಗೆಯೂ ಇಂದು ಅಪ್ ಡೇಟ್ ಸಿಗುವ ನಿರೀಕ್ಷೆಯಿದೆ. ಅವರ ಹುಟ್ಟುಹಬ್ಬ ನಿಮಿತ್ತ ನಮ್ಮ ಕಡೆಯಿಂದಲೂ ಒಂದು ಹ್ಯಾಪೀ ಬರ್ತ್ ಡೇ ಹೇಳೋಣ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಲವ್ವರ್ ಗೆ ವಿಶ್ ಮಾಡಿ ಎಂದ ಅಭಿಮಾನಿಗೆ ಕಿಚ್ಚ ಸುದೀಪ್ ಕೊಟ್ಟ ಪ್ರತಿಕ್ರಿಯೆ ನೋಡಿ