Select Your Language

Notifications

webdunia
webdunia
webdunia
webdunia

ನನ್ನ ಲವ್ವರ್ ಗೆ ವಿಶ್ ಮಾಡಿ ಎಂದ ಅಭಿಮಾನಿಗೆ ಕಿಚ್ಚ ಸುದೀಪ್ ಕೊಟ್ಟ ಪ್ರತಿಕ್ರಿಯೆ ನೋಡಿ

Kiccha Sudeep

Krishnaveni K

ಬೆಂಗಳೂರು , ಗುರುವಾರ, 15 ಫೆಬ್ರವರಿ 2024 (12:53 IST)
Photo Courtesy: Twitter
ಬೆಂಗಳೂರು: ನಟ ಕಿಚ್ಚ ಸುದೀಪ್ ಇತ್ತೀಚೆಗೆ ಆಗಾಗ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುತ್ತಿದ್ದಾರೆ. ಇಂದೂ ಕೂಡಾ ಸುದೀಪ್ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ನಲ್ಲಿ ಪ್ರಶ್ನೋತ್ತರಾವಳಿ ನಡೆಸಿದ್ದಾರೆ.

ಈ ವೇಳೆ ಅಭಿಮಾನಿಗಳು ಅವರಿಗೆ ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪೈಕಿ ಅಭಿಮಾನಿಯೊಬ್ಬರು ಯಾವುದೋ ಜೋಡಿಯ ಫೋಟೋ ಹಾಕಿ ‘ಬಾಸ್ ನನ್ನ ಹುಡುಗಿಗೆ ನಾಳೆಯಿಂದ ಪರೀಕ್ಷೆಯಿದೆ. ಅವಳಿಗೆ ವಿಶ್ ಮಾಡಿ’ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸುದೀಪ್ ‘ನಿಮ್ಮ ಹುಡುಗಿ ಪರೀಕ್ಷೆಗೆ ತಯಾರಾಗಿದ್ದಾಳೆ ಅಂದುಕೊಂಡಿದ್ದೇನೆ ಸರ್’ ಎಂದಿದ್ದಾರೆ.

ಇನ್ನೊಬ್ಬರು, ವರ್ಷಕ್ಕೆ ಎರಡು ಸಿನಿಮಾ ಮಾಡ್ತೀನಿ ಎಂದಿದ್ರಿ. ಎಲ್ಲಿ ಹೋಯ್ತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸುದೀಪ್ ಪ್ರಯತ್ನ ಪಡುತ್ತಿದ್ದೇನೆ. ನನ್ನ ತಂಡವೂ ಇದನ್ನು ಕೇಳಿಸಿಕೊಳ್ಳುತ್ತಿದ್ದೇನೆ ಎಂದುಕೊಂಡಿದ್ದೇನೆ ಎಂದಿದ್ದಾರೆ. ಇನ್ನು, ತಮ್ಮ ಅಭಿಮಾನಿಗಳನ್ನು ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಹಾಯಾಗಿರುತ್ತಾರೆ ಎಂದು ಕೊಂಡಾಡಿದ್ದಾರೆ.

ಇನ್ನು ಬಿಗ್ ಬಾಸ್ ಎನ್ನುವುದು ನನಗೆ ಮೂರು ಹೊತ್ತು ಊಟ ಕೊಡುವ ವೃತ್ತಿಯಲ್ಲಿ ಒಂದು ಎಂದಿದ್ದಾರೆ. ಇನ್ನು, ರಕ್ಷಿತ್ ಶೆಟ್ಟಿ ಜೊತೆ ಥಗ್ಸ್ ಆಫ್ ಮಾಲ್ಗುಡಿ ಸಿನಿಮಾ ಯಾವಾಗ ಮಾಡ್ತೀರಿ ಎಂಬ ಪ್ರಶ್ನೆಗೆ, ನನಗೆ ಗೊತ್ತು ನಾವಿಬ್ಬರೂ ಜೊತೆಯಾದರೆ ಒಳ್ಳೆಯ ಸಿನಿಮಾ ಬರಬಹುದೆಂದು. ಆದರೆ ಅವರಿಗೆ ಅವರದ್ದೇ ಆದ ಜೀವನವಿದೆ. ಹೀಗಾಗಿ ರಕ್ಷಿತ್ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಹುಟ್ಟುಹಬ್ಬ; ನಿಮ್ ಅಪ್ಪನ್ ಹೆಸ್ರು ಉಳಿಸ್ಬಿಟ್ಟೆ ಕಣಯ್ಯ ಟ್ರೆಂಡಿಂಗ್