Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ವೃತ್ತಿ ಜೀವನಕ್ಕೆ 28 ವರ್ಷ

Kiccha Sudeep

Krishnaveni K

ಬೆಂಗಳೂರು , ಬುಧವಾರ, 31 ಜನವರಿ 2024 (08:40 IST)
Photo Courtesy: Twitter
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ವೃತ್ತಿ ಜೀವನಕ್ಕೆ ಇಂದಿಗೆ 28 ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ ಫ್ಯಾನ್ಸ್ ವಿಶೇಷ ಸಿಡಿಪಿ ಬಿಡುಗಡೆ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ವೃತ್ತಿ ಜೀವನಕ್ಕೆ 28 ವರ್ಷ ತುಂಬಿದ ಹಿನ್ನಲೆಯಲ್ಲಿ ಅವರ ಕಡೆಯಿಂದಲೂ ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ. ಕಳೆದ ವರ್ಷ ಇದೇ ದಿನ ಸುದೀಪ್ ತಮ್ಮ ಪತ್ನಿ, ಕುಟುಂಬದವರು ಮತ್ತು ಫ್ಯಾನ್ಸ್ ಗೆ ವಿಶೇಷ ಸಂದೇಶ ಬರೆದು ಧನ್ಯವಾದ ಸಲ್ಲಿಸಿದ್ದರು.

ಎರಡು ವರ್ಷಗಳ ಹಿಂದೆ ಇದೇ ದಿನ ವಿಕ್ರಾಂತ್ ರೋಣ ಸಿನಿಮಾದ ಲುಕ್ ದುಬೈನ ಬುರ್ಜ್ ಖಲೀಫಾ ಟವರ್ ನಲ್ಲಿ ಪದರ್ಶನಗೊಂಡಿತ್ತು. ಹೀಗಾಗಿ ಈ ವರ್ಷವೂ ವಿಶೇಷ ಸುದ್ದಿಗಾಗಿ ಫ್ಯಾನ್ಸ್ ಎದಿರು ನೋಡುತ್ತಿದ್ದಾರೆ.

ಸುದೀಪ್ ಕಿಚ್ಚ ಆಗಿದ್ದು ಹೇಗೆ?
ತಾಯವ್ವ ಸಿನಿಮಾ ಮೂಲಕ 1997 ರಲ್ಲಿ ಸಿನಿಮಾಗೆ ಕಾಲಿಟ್ಟ ಸುದೀಪ್ ಬಳಿಕ ಪ್ರತ್ಯರ್ಥ ಸಿನಿಮಾ ಮಾಡಿದರು. ಆದರೆ ಅವರಿಗೆ ನಿಜವಾಗಿ ಹೆಸರು ತಂದುಕೊಟ್ಟಿದ್ದು ಸುನಿಲ್ ಕುಮಾರ್ ದೇಸಾಯಿಯವರ ಸ್ಪರ್ಶ ಸಿನಿಮಾ. ಮರು ವರ್ಷವೇ ಬಂದ ‘ಹುಚ್ಚ’ ಸಿನಿಮಾ ಅವರ ಸಿನಿ ಕೆರಿಯರ್ ಗೇ ಬ್ರೇಕ್ ಕೊಟ್ಟಿತ್ತು. ಈ ಸಿನಿಮಾ ಬಳಿಕ ಬರೀ ಸುದೀಪ್ ಆಗಿದ್ದ ಅವರ ಹೆಸರಿನ ಮುಂದೆ ಕಿಚ್ಚ ಸೇರ್ಪಡೆಯಾಯಿತು. ಈ ಸಿನಿಮಾ ಬಳಿಕ ಸುದೀಪ್ ತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೊಂದರಂತೆ ಹಿಟ್ ಸಿನಿಮಾ ಕೊಡುತ್ತಾ, ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿಯಲ್ಲೂ ಸಿನಿಮಾ ಮಾಡಿ ಸ್ಟಾರ್ ಪಟ್ಟಕ್ಕೇರಿದರು.

ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಗೆ ಕಾಯುತ್ತಿರುವ ಫ್ಯಾನ್ಸ್
ಸದ್ಯಕ್ಕೆ ಸುದೀಪ್ ಮ್ಯಾಕ್ಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಪೋಸ್ಟರ್ ಬಿಟ್ಟರೆ ಚಿತ್ರತಂಡ ಇದುವರೆಗೆ ಯಾವುದೇ ಅಪ್ ಡೇಟ್ ಕೊಟ್ಟಿಲ್ಲ. ಹೀಗಾಗಿ ಇಂದಾದರೂ ಅಪ್ ಡೇಟ್ ಕೊಡಿ ಎಂದು ಫ್ಯಾನ್ಸ್ ಕೇಳಿಕೊಳ್ಳುತ್ತಿದ್ದಾರೆ. ಮ್ಯಾಕ್ಸ್ ಅಲ್ಲದೆ ಸುದೀಪ್ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿದ್ದು, ಅವಿನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲಿರುವ ರಾಕಿ ಭಾಯಿ ಯಶ್