Select Your Language

Notifications

webdunia
webdunia
webdunia
webdunia

ಹೊರಗೆ ಹೋದ ಈ ಮಾತು ನೆನಪಲ್ಲಿರಲಿ: ರಕ್ಷಕ್ ಗೆ ಟಾಂಗ್ ಕೊಟ್ಟ ಸುದೀಪ್

Kiccha Sudeep

Krishnaveni K

ಬೆಂಗಳೂರು , ಸೋಮವಾರ, 29 ಜನವರಿ 2024 (11:17 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಫೈನಲ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮನೆಯಿಂದ ಹೊರ ಹೋದ ಮೇಲೆ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದ ರಕ್ಷಕ್ ಗೆ ಟಾಂಗ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಿಂದ ಕೆಲವೇ ದಿನಗಳಲ್ಲಿ ಎಲಿಮಿನೇಟ್ ಆಗಿ ಹೋದ ರಕ್ಷಕ್ ಬೇಸರಗೊಂಡಿದ್ದರು. ಈ ಕಾರಣಕ್ಕೆ ಹೊರಗೆ ಹೋದ ಮೇಲೆ ಸಂದರ್ಶನಗಳಲ್ಲೆಲ್ಲಾ ಬಿಗ್ ಬಾಸ್ ಬಗ್ಗೆಯೇ ಟೀಕೆ ಮಾಡುತ್ತಿದ್ದರು. ಇದು ಕಿಚ್ಚನ ಅಸಮಾಧಾನಕ್ಕೆ ಕಾರಣವಾಗಿದೆ.

ಫೈನಲ್ ವೇದಿಕೆಗೆ ಎಲ್ಲಾ ಸ್ಪರ್ಧಿಗಳ ಜೊತೆ ರಕ್ಷಕ್ ಕೂಡಾ ಬಂದಿದ್ದರು. ಆದರೆ ಬಿಗ್ ಬಾಸ್ ಇಡೀ ಸೀಸನ್ ನ ಕೆಲವು ಅಪರೂಪದ ಕ್ಷಣಗಳನ್ನು ವಿಡಿಯೋ ಮಾಡಿ ಹಾಕುವಾಗ ಅಪ್ಪಿತಪ್ಪಿಯೂ ರಕ್ಷಕ್ ಇರುವ ತುಣುಕನ್ನು ಹಾಕಲೇ ಇಲ್ಲ. ಈ ಮೂಲಕ ಬಿಗ್ ಬಾಸ್ ನ್ನೇ ಟೀಕಿಸಿದ್ದ ರಕ್ಷಕ್ ರನ್ನು ಕಡೆಗಣಿಸಲಾಗಿದೆ.

ಅಷ್ಟೇ ಅಲ್ಲದೆ, ಸ್ಪರ್ದಿಗಳ ಜೊತೆ ಮಾತನಾಡುವಾಗ ಬಿಗ್ ಬಾಸ್ ನಿಂದ ಹೊರ ಹೋದ ಮೇಲೆ ಬಿಗ್ ಬಾಸ್ ನ್ನೇ ಟೀಕಿಸುವ ಕೆಲಸ ಮಾಡಬೇಡಿ. ಇದು ಮನೆಯಿಂದ ಹೊರ ಹೋದ ಮೇಲೂ ನೆನಪಲ್ಲಿರಲಿ ಎಂದು ಅಲ್ಲೇ ಕೂತಿದ್ದ ರಕ್ಷಕ್ ಗೆ ಟಾಂಗ್ ಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಜೊತೆಗಿನ ಸಮಸ್ಯೆ ಬಗ್ಗೆ ಕಿಚ್ಚ ಸುದೀಪ್ ನೇರ ಮಾತು