Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾಗಳ ಇಂಗ್ಲಿಷ್ ಟೈಟಲ್ ಮೋಹ

kiccha sudeep

Krishnaveni K

ಬೆಂಗಳೂರು , ಶನಿವಾರ, 20 ಜನವರಿ 2024 (08:20 IST)
ಬೆಂಗಳೂರು: ಇತ್ತೀಚೆಗೆ ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ಚಿತ್ರ ವಿಚಿತ್ರ ಹೆಸರುಗಳನ್ನು ಇಡಲಾಗುತ್ತಿದೆ. ಅದರಲ್ಲೂ ಹೆಚ್ಚಿನವು ಇಂಗ್ಲಿಷ್ ಹೆಸರುಗಳಿಂದ ಪ್ರೇರಿತವಾಗಿದೆ.

ಕಿಚ್ಚ ಸುದೀಪ್ ಮುಂದಿನ ಸಿನಿಮಾಗೆ ‘ಮ್ಯಾಕ್ಸ್’ ಎನ್ನುವ ಟೈಟಲ್ ಇದೆ. ಯಶ್ ಮುಂದಿನ ಸಿನಿಮಾಗೆ ‘ಟಾಕ್ಸಿಕ್’ ಎನ್ನುವ ಟೈಟಲ್. ಧ್ರುವ ಸರ್ಜಾ ಸಿನಿಮಾಗೆ ‘ಮಾರ್ಟಿನ್’ ಎಂಬ ಟೈಟಲ್. ಮಾರ್ಟಿನ್ ಪಾತ್ರದ ಹೆಸರಾದರೂ ಇದರಲ್ಲಿ ಕನ್ನಡತನ ಕಾಣುತ್ತಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ನಾಯಕರಾಗುವ ಚೊಚ್ಚಲ ಸಿನಿಮಾಗೆ ‘ಜಿಮ್ಮಿ’ ಎನ್ನುವ ಹೆಸರಿದೆ. ಇದರ ಥೀಮ್ ಹಾಡೂ ಇಂಗ್ಲಿಷ್ ಮಯ. ಡಾಲಿ ಧನಂಜಯ್ ಮುಂದಿನ ಸಿನಿಮಾ ‘ಅಣ್ಣ ಫ್ರಂ ಮೆಕ್ಸಿಕೊ’ ಅರ್ಧ ಇಂಗ್ಲಿಷ್, ಅರ್ಧ ಕಂಗ್ಲಿಷ್. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ ಸಂಪೂರ್ಣವಾಗಿ ಇಂಗ್ಲಿಷ್ ಅಕ್ಷರವಾದ ಯು ಮತ್ತು ಐ ಅನ್ನು ಬಳಸಲಾಗಿದೆ.

ಪಾತ್ರಕ್ಕೆ ತಕ್ಕಂತೆ, ಕತೆಗೆ ತಕ್ಕಂತೆ ಮತ್ತು ಸ್ಟಾರ್ ಗಳ ಮಾರುಕಟ್ಟೆಗೆ ತಕ್ಕಂತೆ ಟೈಟಲ್ ಇಡಲಾಗುತ್ತಿದೆ. ಅದರ ಜೊತೆಗೆ ಇತ್ತೀಚೆಗೆ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವುದರಿಂದ ಶೀರ್ಷಿಕೆಗಳೂ ಇಂಗ್ಲಿಷ್ ಮಯವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮನ ಬಗ್ಗೆ ವಿವಾದಾತ್ಮಕ ಡೈಲಾಗ್ ಬಗ್ಗೆ ಪ್ರತಿಕ್ರಿಯಿಸಿದ ನಟಿ ನಯನತಾರಾ