Select Your Language

Notifications

webdunia
webdunia
webdunia
webdunia

ಧ್ರು ವ ಸರ್ಜಾ ಮಾರ್ಟಿನ್ ಅಡಿಯೋ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್

Dhruva Sarja

Krishnaveni K

ಬೆಂಗಳೂರು , ಭಾನುವಾರ, 7 ಜನವರಿ 2024 (09:40 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಪರೂಪಕ್ಕೆ ಸಿನಿಮಾ ಮಾಡುವುದಾದರೂ ಅವರ ಮಾರುಕಟ್ಟೆ ವ್ಯಾಲ್ಯೂ ಮಾತ್ರ ಗರಿಷ್ಠ ಮಟ್ಟದಲ್ಲೇ ಇದೆ ಎಂದು ಈಗ ಮತ್ತೊಮ್ಮೆ ಸಾಬೀತಾಗಿದೆ.

ಧ್ರುವ ನಾಯಕರಾಗಿರುವ ಮಾರ್ಟಿನ್ ಸಿನಿಮಾದ ಅಡಿಯೋ ರೈಟ್ಸ್ ನ್ನು ಖ್ಯಾತ ಅಡಿಯೋ ಕಂಪನಿ ಸರೆಗಮ ಸೌತ್ ಬರೋಬ್ಬರಿ 9 ಕೋಟಿ ರೂ.ಗೆ ಖರೀದಿ ಮಾಡಿಕೊಂಡಿದೆ.

ಮಾರ್ಟಿನ್ ಸಿನಿಮಾದ ಟೀಸರ್ ಮಾತ್ರ ಇದುವರೆಗೆ ಬಿಡಲಾಗಿದೆ. ಹಾಗಿದ್ದರೂ ಸಿನಿಮಾದ ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ. ಇತ್ತೀಚೆಗೆ ಫ್ಯಾನ್ಸ್ ಮಾರ್ಟಿನ್ ಅಪ್ ಡೇಟ್ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಇದೀಗ ಕೆಡಿ ಸಿನಿಮಾ ಮುಗಿಸಿಕೊಂಡಿರುವ ಧ್ರುವ ಮಾರ್ಟಿನ್ ಕಡೆಗೆ ಗಮನ ಹರಿಸಬಹುದು ಎನ್ನಲಾಗಿದೆ.

ಸರೆಗಮ ಸೌತ್ ಖ್ಯಾತ ಮತ್ತು ಹಳೆಯ ಅಡಿಯೋ ಕಂಪನಿಯಾಗಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಸೂಪರ್ ಸಿನಿಮಾಗಳ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡ ಖ್ಯಾತಿ ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟೇರ ಸಿನಿಮಾ ನೋಡ್ತಾರಾ ಕಿಚ್ಚ ಸುದೀಪ್?