ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಧ‍್ರುವ ಸರ್ಜಾ ನಾಯಕರಾಗಿರುವ ಕೆಡಿ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.
ಇದೀಗ ಫ್ಯಾನ್ಸ್ ಕೆಡಿ ಶೂಟಿಂಗ್ ಮುಗಿಸಿರುವುದಕ್ಕೆ ಸಂತೋಷವನ್ನೇ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಮೊದಲು ಆರಂಭವಾಗಿದ್ದ ಮಾರ್ಟಿನ್ ಸಿನಿಮಾದ ಸುದ್ದಿಯೇ ಇಲ್ಲವಲ್ಲ ಎಂದೂ ಪ್ರಶ್ನೆ ಮಾಡುತ್ತಿದ್ದಾರೆ.
ಕೆಡಿ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಬಹುತಾರಾಗಣವಿದೆ. ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿದೆ.
ಆದರೆ ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಶುರುವಾಗಿ ಎರಡು ವರ್ಷವೇ ಆಗಿದೆ. ಇನ್ನೂ ಸಿನಿಮಾ ಬಿಡುಗಡೆಯಾಗಿಲ್ಲ. ಒಂದು ಟೀಸರ್ ಹೊರಬಿಟ್ಟಿದ್ದು ಬಿಟ್ಟರೆ ಯಾವುದೇ ಅಪ್ ಡೇಟ್ ಕೂಡಾ ಸಿಕ್ಕಿಲ್ಲ. ಹೀಗಾಗಿ ಅಭಿಮಾನಿಗಳು ಮಾರ್ಟಿನ್ ಬಗ್ಗೆ ಹೇಳಿ ಎಂದು ಧ್ರುವ ಸರ್ಜಾಗೆ ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.