Select Your Language

Notifications

webdunia
webdunia
webdunia
webdunia

ಇನ್ಮುಂದೆ ಬಿಗ್ ಬಾಸ್ ಹೋಸ್ಟ್ ಆಗಲ್ವಾ ಕಿಚ್ಚ ಸುದೀಪ್

Kiccha Sudeep

Krishnaveni K

ಬೆಂಗಳೂರು , ಮಂಗಳವಾರ, 30 ಜನವರಿ 2024 (10:20 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ 10 ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇದೀಗ ಮುಂದಿನ ಬಿಗ್ ಬಾಸ್ ಗೂ ಸುದೀಪ್ ಹೋಸ್ಟ್ ಆಗಿ ಇರ್ತಾರಾ ಎಂಬ ಪ್ರಶ್ನೆ ಮೂಡಿದೆ.

ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾದಾಗಿನಿಂದ ಸುದೀಪ್ ಹೋಸ್ಟ್ ಮಾಡುತ್ತಲೇ ಬಂದಿದ್ದಾರೆ. ಇದು ನನ್ನ ಮೆಚ್ಚಿನ ಶೋ ಎಂದು ಕಿಚ್ಚ ಸುದೀಪ್ ಅನೇಕ ಬಾರಿ ಹೇಳಿದ್ದಾರೆ. ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುವುದರಲ್ಲಿ ಕಿಚ್ಚನ ಮೀರಿಸುವವರಿಲ್ಲ ಎಂಬಂತೆ ಅವರು ನಿರೂಪಣೆ ಮಾಡುತ್ತಾರೆ.

ಬೇರೆ ಭಾಷೆಗೆ ಹೋಲಿಸಿದರೂ ಕಿಚ್ಚನಂತೆ ಒಂದೂ ಸೀಸನ್ ಬಿಡದೇ ಶೋ ಹೋಸ್ಟ್ ಮಾಡಿದ ನಿರೂಪಕರು ಯಾರೂ ಇಲ್ಲ. ಆದರೆ ಪ್ರತೀ ಬಾರಿ ಬಿಗ್ ಬಾಸ್ ಸೀಸನ್ ಮುಗಿದ ಮೇಲೂ ಮುಂದಿನ ಸೀಸನ್ ಗೂ ಸುದೀಪ್ ಇರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡುತ್ತದೆ.

ಇದೀಗ ಬಿಗ್ ಬಾಸ್ ಸೀಸನ್ 10 ಮುಗಿದಿದ್ದು, ಈಗಲೂ ಮುಂದಿನ ಸೀಸನ್ ಗೆ ಕಿಚ್ಚ ಸುದೀಪ್ ಇರುತ್ತಾರಾ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಕೆಲವರು ಸುದೀಪ್ ಮುಂದಿನ ಸೀಸನ್ ನಡೆಸಿಕೊಡಲ್ಲ ಎಂಬ ವದಂತಿ ಹರಡಿದ್ದರು. ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದ ಕರಾರು ಮುಗಿದಿದೆ. ಮುಂದಿನ ಸೀಸನ್ ನ್ನು ಅವರು ಹೋಸ್ಟ್ ಮಾಡುವುದು ಅನುಮಾನ ಎಂದು ಯಾರೋ ಸುದ್ದಿ ಹಬ್ಬಿಸಿದ್ದರು.

ಆದರೆ ಅದೆಲ್ಲಾ ಸುಳ್ಳು ಎನ್ನಲಾಗಿದೆ. ಸುದೀಪ್ ಇಲ್ಲದೇ ಬಿಗ್ ಬಾಸ್ ಕನ್ನಡ ಶೋ ಇಲ್ಲ. ಹೀಗಾಗಿ ಅವರ ಒಪ್ಪಂದ ನವೀಕರಿಸಿಕೊಂಡು ಮತ್ತೆ ಹೋಸ್ಟ್ ಆಗಿ ಮರಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ವದಂತಿಗಳಿಗೆ ಫ್ಯಾನ್ಸ್ ಕಿವಿಗೊಡಬೇಕಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳೊಂದಿಗೆ ಹರಟೆ ಶುರುವಿಟ್ಟುಕೊಂಡ ಕಿಚ್ಚ!