Daily Horoscope

Select Your Language

Notifications

webdunia
webdunia
webdunia
webdunia

ಅಭಿಮಾನಿಗಳೊಂದಿಗೆ ಹರಟೆ ಶುರುವಿಟ್ಟುಕೊಂಡ ಕಿಚ್ಚ!

ನಟ ಸುದೀಪ್‌
ಬೆಂಗಳೂರು :ನಟ ಸುದೀಪ್‌ ಹರಟೆ ಶುರುವಿಟ್ಟುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಸಂದೇಶ ಹಂಚಿಕೊಂಡ ಕಿಚ್ಚ, ಈಗ ಕೆಲವು ನಿಮಿಷಗಳ ಕಾಲ ನಾನು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದಿದ್ದಲ್ಲದೇ ಹ್ಯಾಷ್‌ ಟ್ಯಾಗ್‌ ಅಡಿಯಲ್ಲಿ ಪ್ರಶ್ನೆಗಳನ್ನು ಕಳಿಸುವಂತೆ ಕೋರಿದ್ದರು.ಕಿಚ್ಚನ ಮನವಿಗೆ ಭರ್ಜರಿಯಾಗಿ ಪ್ರತಿಕ್ರಿಯಿಸಿದ ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನು ಒಗಾಯಿಸಿದ್ದಾರೆ. ಕಿಚ್ಚ ಸಹ ಹಲವು ಪ್ರಶ್ನೆಗಳಿಗೆ ಸಮಾಧಾನದಿಂದ, ತಮಾಷೆಯಿಂದ ಉತ್ತರಿಸಿದ್ದಾರೆ. 

ನೀವು  ಥಗ್ಸ್‌ ಆಫ್‌ ಮಾಲ್ಗುಡಿ ಸಿನಿಮಾ ಯಾವಾಗ ಬರುತ್ತೆ? , ನಿಮ್ಮ ಮುಂದಿನ ಸಿನಿಮಾದ ಆಡಿಯೋ ಲಾಂಚ್‌ ಪ್ರೋಗ್ರಾಮ್‌ ನಮ್ಮ ಊರಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ? ….. ಹೀಗೆ ಅಭಿಮಾನಿಗಳು ತರಾವರಿ ಪ್ರಶ್ನೆಗಳನ್ನು ಹರಿಬಿಟ್ಟಿದ್ದಾರೆ. ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಕಿಚ್ಚ, ಇನ್ನೂ ಕೆಲವು ಪ್ರಶ್ನಗಳಿಗೆ ಇಮೋಜಿ ಮೂಲಕವೇ ಪ್ರತಿಕ್ರಿಯಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಣ್ಣನ ಮನೆಗೆ ಕರೆಸಿ ಉಪಾಧ್ಯಕ್ಷ ಸಿನಿಮಾಗೆ ಅಭಿನಂದಿಸಿದ ರಾಕಿಂಗ್ ಸ್ಟಾರ್ ಯಶ್