Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲಿರುವ ರಾಕಿ ಭಾಯಿ ಯಶ್

yash

Krishnaveni K

ಮುಂಬೈ , ಮಂಗಳವಾರ, 30 ಜನವರಿ 2024 (12:05 IST)
ಮುಂಬೈ: ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಈಗ ಬಾಲಿವುಡ್ ನಲ್ಲೂ ಬೇಡಿಕೆ ಪಡೆದುಕೊಂಡಿದ್ದಾರೆ. ಬಾಲಿವುಡ್ ನಿರ್ಮಾಪಕರೂ ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ.

ಈಗಾಗಲೇ ಯಶ್ ಟಾಕ್ಸಿಕ್ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾ ಪ್ಯಾನ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ. ಮಲಯಾಳಂನ ಗೀತು ಮೋಹನ್ ದಾಸ್ ಈ ಸಿನಿಮಾದ ನಿರ್ದೇಶಕರು. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾವನ್ನು ನಿರ್ಮಿಸುತ್ತಿದೆ.

ಇದರ ನಡುವೆ ಯಶ್ ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ಮಾಡಲಿರುವ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಇದರ ನಡುವೆ ಯಶ್ ಮತ್ತೊಂದು ಪ್ರಾಜೆಕ್ಟ್ ಒಪ್ಪಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಯಶ್ ಮತ್ತು ಶಾರುಖ್ ಖಾನ್ ಜೊತೆಯಾಗಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ತೆರೆಮರೆಯ ಕೆಲಸಗಳು ಆರಂಭವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್‍ ಎಂಟರ್ ಟೈನ್ ಮೆಂಟ್ ಸಂಸ್ಥೆಯೇ ಬಂಡವಾಳ ಹೂಡಲಿದೆ ಎಂಬ ಸುದ್ದಿಯಿದೆ.

ಇಬ್ಬರಿಗೂ ತಮ್ಮದೇ ಆದ ಸಾಕಷ್ಟು ಅಭಿಮಾನಿ ವರ್ಗದವರಿದ್ದಾರೆ. ಅವರೆಲ್ಲರನ್ನೂ ಮೆಚ್ಚಿಸಬೇಕಾದರೆ ಸ್ಟ್ರಾಂಗ್ ಕತೆಯೇ ಬೇಕು. ಹೀಗಾಗಿ ಸ್ಕ್ರಿಪ್ಟ್ ಗೆ ಸಾಕಷ್ಟು ತಯಾರಿ ನಡೆಸಲಾಗುತ್ತಿದೆ. ಕೆಲವೇ ಸಮಯದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಸದ್ಯಕ್ಕೆ ಯಶ್ ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಕರೀನಾ ಕಪೂರ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಬಿಗ್ ಬಾಸ್ ಹೋಸ್ಟ್ ಆಗಲ್ವಾ ಕಿಚ್ಚ ಸುದೀಪ್