Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಫೇಕ್ ವಿಡಿಯೋ ವೈರಲ್

Yash

Krishnaveni K

ಬೆಂಗಳೂರು , ಬುಧವಾರ, 24 ಜನವರಿ 2024 (12:07 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿಗೆ ವಿಶ್ ಮಾಡಿರುವ ಫೇಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಸಂಗೀತಾ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಸೆಯೇನು ಎಂದು ಹೇಳಿಕೊಂಡಿದ್ದರು. ಅದರಲ್ಲಿ ತಾವು ನಟಿಸಿದ್ದ ಚಾರ್ಲಿ 777 ಸಿನಿಮಾದ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಕಿರಣ್ ರಾಜ್ ಮನೆಗೆ ಭೇಟಿ ನೀಡಬೇಕು ಎಂಬುದು ಮೊದಲ ಬೇಡಿಕೆಯಾಗಿತ್ತು. ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಸಂದೇಶ ಕೇಳಬೇಕು ಎಂದಿದ್ದರು.

ಇದರ ಬೆನ್ನಲ್ಲೇ ಯಶ್ ಅವರ ನಕಲಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ಹವಾ ಜೋರಾಗಿದೆ ಎಂದು ಗೊತ್ತಾಯ್ತು. ಮೂರು ತಿಂಗಳಿನಿಂದ ಸಂಪರ್ಕ ಕಳೆದುಕೊಂಡು ಹಾರ್ಡ್‍ ವರ್ಕ್ ಮಾಡಿದ್ದೀರ. ಫೈನಲ್ಸ್ ನಡೆಯುತ್ತಿದೆ. ನೀವು ನನ್ನ ಅಭಿಮಾನಿ ಎಂದು ಗೊತ್ತಾಯ್ತು. ಎಲ್ಲರಿಗೂ ಶುಭವಾಗಲಿ’ ಎಂದು ಯಶ್ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿತ್ತು.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಸಲಿಯತ್ತು ಪರೀಕ್ಷಿಸಲಾಗಿದ್ದು, ಈ ವಿಡಿಯೋ 2018 ರಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸ್ಪರ್ಧಿ ಪ್ರತೀಕ್ಷಾಗೆ ಮಾಡಿದ ವಿಶ್ ಎಂದು ಗೊತ್ತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರದ ಮುಂದೆ ಭಾವಪರವಶರಾಗಿ ಕಣ್ಣೀರು ಹಾಕಿದ್ದ ಸೋನು ನಿಗಂ, ಹರಿಹರನ್