Select Your Language

Notifications

webdunia
webdunia
webdunia
webdunia

ರಾಮಮಂದಿರದ ಮುಂದೆ ಭಾವಪರವಶರಾಗಿ ಕಣ್ಣೀರು ಹಾಕಿದ್ದ ಸೋನು ನಿಗಂ, ಹರಿಹರನ್

Sonu Nigam

Krishnaveni K

ಅಯೋಧ್ಯೆ , ಬುಧವಾರ, 24 ಜನವರಿ 2024 (11:24 IST)
ಅಯೋಧ್ಯೆ: ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಂ, ಹರಿಹರನ್ ಭಾವಪರವಶರಾಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಸೋನು ನಿಗಂ, ಹರಿಹರನ್, ಕೈಲಾಶ್ ಕೇರ್ ಸೇರಿದಂತೆ ಗಾಯಕರ ಸಮೂಹವೇ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮೊದಲು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ರಾಮನ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ಭಕ್ತಿ ಸಾಗರದಲ್ಲಿ ಮುಳುಗಿಸಿದ್ದರು.

ರಾಮನ ಹಾಡುಗಳನ್ನು ಹಾಡುತ್ತಾ ರಾಮಮಂದಿರ ಲೋಕಾರ್ಪಣೆ ಬಗ್ಗೆ ಮಾತನಾಡುವಾಗ ಗಾಯಕ ಹರಿಹರನ್ ಕಣ್ಣೀರು ಹಾಕಿದರು. ಅವರನ್ನು ನೋಡಿ ಸೋನು ನಿಗಂ ಕೂಡಾ ಕಣ್ಣೀರು ಹಾಕಿದ್ದಾರೆ. ಇದನ್ನು ಸ್ವತಃ ಸೋನು ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದಾರೆ.

ಈ ಇಬ್ಬರು ಗಾಯಕರ ಕಣ್ಣೀರು ನೋಡಿ ಅಲ್ಲಿದ್ದ ಎಲ್ಲಾ ಗಾಯಕರೂ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ರಾಮಮಂದಿರ ನಿರ್ಮಾಣ ಎನ್ನುವುದು ಎಲ್ಲಾ ಹಿಂದೂಗಳ ಕನಸಾಗಿತ್ತು. ಅದು ನನಸಾದ ಗಳಿಗೆಯಲ್ಲಿ ಎಲ್ಲರೂ ಭಾವುಕರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಡಿ ಸಿನಿಮಾಗಾಗಿ ಕನ್ನಡಕ್ಕೆ ಬಂದ ಬಾಲಿವುಡ್ ಬೆಡಗಿ ನೋರಾ ಫತೇಹಿ