Select Your Language

Notifications

webdunia
webdunia
webdunia
webdunia

ಬರಿಗಾಲಲ್ಲೇ ಅಯೋಧ್ಯೆಗೆ ಬಂದಿದ್ದ ನಟ ಜಾಕಿಶ್ರಾಫ್!

Jackie Shroff
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಾಲಿವುಡ್ ತಾರೆಯರ ದಂಡೇ ಹರಿದುಬಂದಿತ್ತು.
 

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಟ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ರಣಬೀರ್ ಕಪೂರ್, ಅಲಿಯಾ ಭಟ್, ಜಾಕಿ ಶ್ರಾಫ್, ವಿವೇಕ್ ಓಬೇರಾಯ್ ಸೇರಿದಂತೆ ಅನೇಕರು ಬಂದಿದ್ದರು.

ಈ ಪೈಕಿ ಜಾಕಿ ಶ್ರಾಫ್ ಬರಿಗಾಲಲ್ಲೇ ಅಯೋಧ‍್ಯೆಗೆ ಬಂದಿದ್ದರು! ಈ ವಿಚಾರವನ್ನು ವಿವೇಕ್ ಓಬೆರಾಯ್ ಸಾಕ್ಷಿ ಸಮೇತ ಬಹಿರಂಗಗೊಳಿಸಿದ್ದಾರೆ. ಜಾಕಿ ಶ್ರಾಫ್ ಇದಕ್ಕೆ ಮೊದಲು ಮಹಾರಾಷ್ಟ್ರದಲ್ಲಿ ರಾಮ ದೇವಾಲಯವನ್ನು ಸ್ವಚ್ಛಗೊಳಿಸಿ ಸುದ್ದಿಯಾಗಿದ್ದರು.

ಆದರೆ ಅಯೋಧ‍್ಯೆಯ ಪವಿತ್ರ ನೆಲವನ್ನು ಸ್ಪರ್ಶಿಸಲು ಬಂದಾಗ ಚಪ್ಪಲಿ ಧರಿಸದೇ ಬರಿಗಾಲಲ್ಲಿ ನಡೆದುಕೊಂಡು ಬಂದಿದ್ದರು. ಜಾಕಿ ಶ್ರಾಫ್ ವಿಡಿಯೋ ಪ್ರಕಟಿಸಿರುವ ವಿವೇಕ್ ಓಬೆರಾಯ್, ಅವರು ಚಪ್ಪಲಿಯಿಲ್ಲದೇ ಬಂದಿದ್ದಾರೆ. ರಾಮನ ಜನ್ಮ ಸ್ಥಳದಲ್ಲಿ ಚಪ್ಪಲಿಯೇ ಬೇಕಾಗಿಲ್ಲ ಎಂದು ಬರಿಗಾಲಲ್ಲಿ ಬಂದಿದ್ದಾರೆ ಎಂದು ವಿವೇಕ್ ವಿವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮಮಂದಿರ ರಾಮಲಲ್ಲಾ ದರ್ಶನ ಸಮಯ, ಎಂಟ್ರಿ ಟಿಕೆಟ್ ಸಿಗೋದು ಎಲ್ಲಿ?