Publish Date: Mon, 22 Jan 2024 (13:19 IST)
Updated Date: Mon, 22 Jan 2024 (13:19 IST)
ಅಯೋಧ್ಯೆ: ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾರತದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ‍್ಯರು, ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ.
ಅನೇಕ ಕ್ಷೇತ್ರದ ಸಾಧಕರಿಗೆ ರಾಮಜನ್ಮಭೂಮಿ ಟ್ರಸ್ಟ್ ಆಹ್ವಾನ ನೀಡಿತ್ತು. ಅದರಂತೆ ಕ್ರಿಕೆಟ್, ಸಿನಿಮಾ, ಸಾಹಿತ್ಯ, ಉದ್ಯಮ ಸೇರಿದಂಥೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿದ್ದಾರೆ.
ಕ್ರಿಕೆಟ್ ಲೋಕದ ದೇವರು ಸಚಿನ್ ತೆಂಡುಲ್ಕರ್, ರವೀಂದ್ರ ಜಡೇಜಾ, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಅಥ್ಲೆಟ್ ಪಿ.ಟಿ ಉಷಾ ಭಾಗಿಯಾಗಿದ್ದಾರೆ. ಸೆಲೆಬ್ರಿಟಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.
ಇನ್ನು, ಸಿನಿಮಾ ಕ್ಷೇತ್ರದ ಗಣ್ಯರ ಪೈಕಿ ನಟ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ರಿಷಬ್ ಶೆಟ್ಟಿ, ವಿಕ್ಕಿ ಕೌಶಾಲ್, ಕತ್ರಿನಾ ಕೈಫ್, ಸೋನು ನಿಗಂ, ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ ಸೇರಿದಂತೆ ಗಣ್ಯಾತಿಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
Krishnaveni K
Publish Date: Mon, 22 Jan 2024 (13:19 IST)
Updated Date: Mon, 22 Jan 2024 (13:19 IST)