Select Your Language

Notifications

webdunia
webdunia
webdunia
webdunia

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಸಂಪೂರ್ಣ: ಬಾಲಕನಾಗಿ ಅಯೋಧ್ಯೆಗೆ ಮತ್ತೆ ಬಂದ ರಾಮ

Ayodhya Ram Mandir Prana Prathistha

Krishnaveni K

ಅಯೋಧ್ಯೆ , ಸೋಮವಾರ, 22 ಜನವರಿ 2024 (12:37 IST)
Photo Courtesy: Twitter
ಅಯೋಧ್ಯೆ: ಕೋಟ್ಯಾಂತರ ಜನರ ಕನಸು ಕೊನೆಗೂ ನನಸಾಯಿತು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠೆ ನೆರವೇರಿದೆ. ಇದೊಂದು ಭಾವನಾತ್ಮಕ ಗಳಿಗೆಯಾಯಿತು.

ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಠಾ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಪೂಜಾ ವಿಧಿ ವಿಧಾನಗಳ ಜೊತೆಗೆ ದರ್ಬೆ ಸುತ್ತಿದ ದಂಡದಿಂದ ರಾಮಲಲ್ಲಾನ ಮೂರ್ತಿಯನ್ನು ಸ್ಪರ್ಶಿಸಿ ದೇವರ ಶಕ್ತಿ ಆವಾಹನೆ ಮಾಡುವ ಮೂಲಕ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು. ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್, ಆನಂದಿ ಬೆನ್ ಪಟೇಲ್, ಪೇಜಾವರ ಶ್ರೀಗಳು, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಪ್ರಮುಖರು ಗರ್ಭಗುಡಿಯಲ್ಲಿ ಪೂಜಾ ವಿಧಿ ವಿಧಾನಗಳಲ್ಲಿ ಭಾಗಿಯಾಗಿದ್ದಾರೆ.

ಮಂತ್ರ ಘೋಷಗಳೊಂದಿಗೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಗಳು ನೆರವೇರುತ್ತಿದ್ದಂತೆ ಮಂಗಳ ವಾದ್ಯ ಮೊಳಗಿಸಲಾಯಿತು. ಇನ್ನೊಂದೆಡೆ ಹೆಲಿಕಾಪ್ಟರ್ ಮೂಲಕ ರಾಮ ಮಂದಿರದ ಸುತ್ತಲೂ ಹೂ ಮಳೆ ಸುರಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಶಂಖನಾದದೊಂದಿಗೆ ಪವಿತ್ರ ವಸ್ತ್ರ ಹಿಡಿದು ಮಂದಿರ ಪ್ರವೇಶಿಸಿದ ಪ್ರಧಾನಿ ಮೋದಿ