Publish Date: Mon, 22 Jan 2024 (08:47 IST)
Updated Date: Mon, 22 Jan 2024 (08:52 IST)
ಅಯೋಧ್ಯೆ: ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿರುವ ಘಟಾನುಘಟಿ ತಾರೆಯರು, ವಿಐಪಿಗಳು ಈಗಾಗಲೇ ಅಯೋಧ್ಯೆಗೆ ಬಂದಿಳಿದಿದ್ದಾರೆ. ಅಯೋಧ್ಯೆಗೆ ಬಂದಿಳಿದ ತಾರೆಯರು ಯಾರೆಲ್ಲಾ ಎಂದು ನೋಡಿ.
ಕನ್ನಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ಅಯೋಧ್ಯೆಗೆ ತಲುಪಿರುವುದಾಗಿ ಫೋಟೋ ಸಮೇತ ಪ್ರಕಟಿಸಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಅಯೋಧ್ಯೆಗೆ ಬಂದಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅಯೋಧ್ಯೆಗೆ ಬಂದಿದ್ದಾರೆ.
ಇನ್ನು, ಅಪಾರ ದೈವಭಕ್ತಿ ಹೊಂದಿರುವ ಮೆಗಾಸ್ಟಾರ್ ಚಿರಂಜೀವಿ, ಪತ್ನಿ ಮತ್ತು ಪುತ್ರ ರಾಮ್ ಚರಣ್ ಜೊತೆ ಅಯೋಧ್ಯೆಗೆ ಬಂದಿದ್ದಾರೆ. ಇನ್ನು, ಬಾಲಿವುಡ್ ನಟ ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್ ದಂಪತಿ ಕೂಡಾ ಅಯೋಧ್ಯೆ ಏರ್ ಪೋರ್ಟ್ ಗೆ ಬಂದಿಳಿದಿದ್ದಾರೆ. ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅಯೋಧ್ಯೆಯಲ್ಲಿರುವ ಫೋಟೋ ಪ್ರಕಟಿಸಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ, ಹರ್ಮನ್ ಪ್ರೀತ್ ಕೌರ್, ಅಥ್ಲಿಟ್ ನೀರಜ್ ಚೋಪ್ರಾ ಸೇರಿದಂತೆ ಪ್ರಮುಖ ಕ್ರೀಡಾಳುಗಳನ್ನು ಆಹ್ವಾನಿಸಲಾಗಿದೆ. ಇವರೆಲ್ಲರೂ ಇಂದಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
Krishnaveni K
Publish Date: Mon, 22 Jan 2024 (08:47 IST)
Updated Date: Mon, 22 Jan 2024 (08:52 IST)