Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ಇನ್ನು ರಾಮ ರಾಜ್ಯ: ರಾಮಮಂದಿರ ಉದ್ಘಾಟನೆಗೆ ಬರಲಿರುವ ಗಣ್ಯರು ಯಾರೆಲ್ಲಾ?

ayodhya ram mandir

Krishnaveni K

ನವದೆಹಲಿ , ಸೋಮವಾರ, 22 ಜನವರಿ 2024 (08:21 IST)
ನವದೆಹಲಿ: ಹಿಂದೂ ಧರ್ಮೀಯರ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮಮಂದಿರ ಲೋಕಾರ್ಪಣೆಯಾಗಲಿದೆ.
 

ರಾಮ ಮಂದರಿ ಟ್ರಸ್ಟ್ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳೂ ನಡೆಯಲಿವೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ, ರಾಮಮಂದಿರ ಲೋಕಾರ್ಪಣೆ ಕಾರ್ಯಗಳು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಾಸ್ತ್ರೋಸ್ತ್ರವಾಗಿ ನೆರವೇರಲಿದೆ. ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಈ ವಿಶೇಷ ದಿನವನ್ನು ಆನಂದ ಮಹೋತ್ಸವವಾಗಿ ಆಚರಿಸುವಂತೆ ರಾಮಮಂದಿರ ಟ್ರಸ್ಟ್ ಕರೆ ಕೊಟ್ಟಿದೆ.

ಇಂದಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರುಗಳು, ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಸೂಪರ್ ಸ್ಟಾರ್ ರಜನೀಕಾಂತ್, ರಾಮಾಯಣ ಧಾರವಾಹಿ ಖ್ಯಾತಿಯ ಅರುಣ್ ಗೋವಿಲ್, ಸೀತಾ ಖ್ಯಾತಿಯ ದೀಪಿಕಾ, ಉದ್ಯಮಿ ರತನ್ ಟಾಟಾ, ಮುಕೇಶ್ ಅಂಬಾನಿ, ಗೌತಮ್ ಅದಾನಿ, ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದ್ದು, ಈ ವಿಶೇಷ ಗಳಿಗೆಗೆ ಸಾಕ್ಷಿಯಾಗಲಿದ್ದಾರೆ.

ಸುಮಾರು 3000 ಸಾವಿರ ಗಣ‍್ಯರು ಮತ್ತು 5000 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದೆ. ಈ ಮೂಲಕ ರಾಮ ಜನ್ಮಭೂಮಿಯಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣ ಮಾಡುವ ಹಿಂದೂ ಧರ್ಮೀಯರ ಕನಸು ನನಸಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯ ರಾಮಮಂದಿರದಲ್ಲಿ ಎಷ್ಟು ಹೊತ್ತಿಗೆ ಕಾರ್ಯಕ್ರಮ? ಲೈವ್ ಎಲ್ಲಿ ವೀಕ್ಷಿಸಬೇಕು?