Select Your Language

Notifications

webdunia
webdunia
webdunia
webdunia

ರಾಮಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಲ್ ಕೆ ಅಡ್ವಾಣಿ

advani-murali manoharjoshi

Krishnaveni K

ಅಯೋಧ್ಯೆ , ಸೋಮವಾರ, 22 ಜನವರಿ 2024 (10:24 IST)
ಅಯೋಧ್ಯೆ: ಇಂದು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕ, ರಾಮಮಂದಿರ ಹೋರಾಟದ ಪ್ರಮುಖ ರೂವಾರಿಯಾಗಿದ್ದ ಎಲ್.ಕೆ. ಅಡ್ವಾಣಿ ಭಾಗಿಯಾಗುತ್ತಿಲ್ಲ.

ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಪ್ರಮುಖರು. ಇವರಿಬ್ಬರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಇಬ್ಬರೂ ನಾಯಕರು ಪಾಲ್ಗೊಳ್ಳುತ್ತಿಲ್ಲ.

ಅಯೋಧ್ಯೆಯಲ್ಲಿ ಈಗ ವಿಪರೀತ ಚಳಿಯ ವಾತಾವರಣವಿದೆ. ಹೀಗಾಗಿ 96 ವರ್ಷದ ಎಲ್.ಕೆ. ಅಡ್ವಾಣಿ ಮತ್ತು 90 ವರ್ಷದ ಮುರಳಿ ಮನೋಹರ್ ಜೋಶಿಯವರಿಗೆ ಭಾಗವಹಿಸದೇ ಇರಲು ಮನವಿ ಮಾಡಲಾಗಿತ್ತು. ಹೀಗಾಗಿ ಇಬ್ಬರೂ ಇಂದಿನ ಕಾರ್ಯಕ್ರಮದಿಂದ ಹೊರಗುಳಿಯಲಿದ್ದಾರೆ.

ಈ ವಿಚಾರದ ಬಗ್ಗೆ ಅನೇಕರು ಪರ-ವಿರೋಧ ಚರ್ಚೆ ನಡೆಸಿದ್ದರು. ಆದರೆ ಹಿರಿಯರ ಆರೋಗ್ಯದ ದೃಷ್ಟಿಯಿಂದ ಈ ನಡೆ ಅನಿವಾರ್ಯ ಎಂದು ರಾಮಜನ್ಮಭೂಮಿ ಟ್ರಸ್ಟ್ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಶ್ರೀರಾಮ ಘೋಷಣೆ ಕೂಗಿದ ಕಾರ್ಯಕರ್ತರು: ಸಿಟ್ಟಿಗೆದ್ದ ರಾಹುಲ್ ಗಾಂಧಿ