ನವದೆಹಲಿ : ಪ್ರಧಾನಿ ಮೋದಿ, ರಾಜ್ಯದ ಎಲ್ಲಾ ಜನತೆಗೆ ಒಳಿತಾಗಲೆಂದು ಹಾರೈಸುತ್ತೇನೆ. ಭಾರತದ ಅಭಿವೃದ್ಧಿಯಲ್ಲಿ ಮಣಿಪುರ ಬಲವಾದ ಪಾತ್ರ ನಿರ್ವಹಿಸಿದೆ. ಮಣಿಪುರದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಮಣಿಪುರ ಅಭಿವೃದ್ಧಿಯಲ್ಲಿ ಸತತವಾಗಿ ಮುಂದುವರೆಯಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಣಿಪುರ ನಿರ್ಮಾಣ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಶಾನ್ಯ ರಾಜ್ಯದ ಜನತೆಗೆ ಭಾನುವಾರ ಶುಭ ಹಾರೈಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ವರಿಷ್ಠರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮಣಿಪುರ ನಿರ್ಮಾಣ ದಿನದ ಶುಭಕೋರಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಟ್ವೀಟ್ ಮಾಡಿದ್ದು, ಮಣಿಪುರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಿಗೆ ಸಂಸ್ಥಾಪನಾ ದಿನದ ಶುಭಾಶಯಗಳು. ಈ 52 ವರ್ಷಗಳಲ್ಲಿ ರಾಷ್ಟ್ರದ ನಿರ್ಮಾಣದಲ್ಲಿ ಈ ರಾಜ್ಯಗಳ ಅದ್ಭುತ ಸೌಂದರ್ಯ, ವೈವಿಧ್ಯತೆ ಹಾಗೂ ಸಮಗ್ರತೆ ಬೃಹತ್ ಕೊಡುಗೆ ನೀಡಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ, ಸಮೃದ್ಧತೆ ಹಾಗೂ ಸಮಗ್ರ ಅಭಿವೃದ್ಧಿ ನೆಲೆಸಲಿ ಎಂದು ಹಾರೈಸುವುದಾಗಿ ಹೇಳಿದ್ದಾರೆ.