Select Your Language

Notifications

webdunia
webdunia
webdunia
webdunia

ಕೆಡಿ ಸಿನಿಮಾಗಾಗಿ ಕನ್ನಡಕ್ಕೆ ಬಂದ ಬಾಲಿವುಡ್ ಬೆಡಗಿ ನೋರಾ ಫತೇಹಿ

Nora Fatehi

Krishnaveni K

ಬೆಂಗಳೂರು , ಬುಧವಾರ, 24 ಜನವರಿ 2024 (10:48 IST)
Photo Courtesy: facebook
ಬೆಂಗಳೂರು: ಧ್ರುವ ಸರ್ಜಾ ನಾಯಕರಾಗಿರುವ ಕೆಡಿ ಸಿನಿಮಾಗೆ ಬಾಲಿವುಡ್‍ ಬೆಡಗಿ ನೋರಾ ಫತೇಹಿ ಎಂಟ್ರಿ ಕೊಟ್ಟಿದ್ದಾರೆ. ಈ ವಿಚಾರವನ್ನು ಖುದ್ದು ಚಿತ್ರತಂಡವೇ ಖಚಿತಪಡಿಸಿದೆ.

ಕೆಡಿ ಸಿನಿಮಾದಲ್ಲಿ ಈಗಾಗಲೇ ಬಹುತಾರಾಗಣವಿದೆ. ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ ಬೆಡಗಿ ನೋರಾ ಫತೇಹಿ ಎಂಟ್ರಿ ಕೊಟ್ಟಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಕೇಳಬೇಕೇ? ಪಡ್ಡೆ ಹೈಕಳನ್ನು ಹುಚ್ಚೆದ್ದು ಕುಣಿಸುವ ಐಟಂ ಸಾಂಗ್ ಇದ್ದೇ ಇರುತ್ತದೆ. ಇದೀಗ ಫತೇಹಿ ಕೂಡಾ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಆದರೆ ಕೇವಲ ಡ್ಯಾನ್ಸ್ ಮಾತ್ರಾನಾ ಪಾತ್ರವೂ ಮಾಡಿದ್ದಾರಾ ಎಂಬ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

ಇದೇ ಮೊದಲ ಬಾರಿಗೆ ನೋರಾ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆನಡಿಯನ್ ಡ್ಯಾನ್ಸರ್ ನೋರಾ ಈಗಾಗಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅವರಿಗೆ ಇದು ಮೊದಲ ಸಿನಿಮಾ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ10: ಬಿಗ್ ಬಾಸ್ ಗೆ ಬರ್ತಾರಾ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ?