Publish Date: Thu, 15 Feb 2024 (12:15 IST)
Updated Date: Thu, 15 Feb 2024 (12:25 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಇದಕ್ಕೆ ಅಭಿಮಾನಿಗಳು ನಿನ್ನೆಯಿಂದಲೇ ಸೆಲೆಬ್ರೇಷನ್ ಶುರು ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ನಟ ದರ್ಶನ್. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಿಂಗಳ ಮುಂಚಿತವಾಗಿ ಸೆಲೆಬ್ರೇಷನ್ ಶುರು ಮಾಡುತ್ತಾರೆ. ಆದರೆ ಈ ಬಾರಿ ಒಂದು ತಿಂಗಳ ಮೊದಲೇ ದರ್ಶನ್ ನನ್ನ ಹುಟ್ಟುಹಬ್ಬಕ್ಕೆ ಹಾರ, ತುರಾಯಿ, ಕೇಕ್ ಎಂದು ಖರ್ಚು ಮಾಡಬೇಡಿ. ಅದರ ಬದಲು ಬಡವರಿಗೆ ನೀಡಲು ಅಕ್ಕಿ, ಬೇಳೆ ದಾನ ಮಾಡಿ. ಅದನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದಿದ್ದರು.
ಅದರಂತೆ ಅಭಿಮಾನಿಗಳು ತಮ್ಮ ಕೈಲಾದ ದಾನ ಮಾಡುತ್ತಿದ್ದಾರೆ. ನಿನ್ನೆಯೇ ದರ್ಶನ್ ಹುಟ್ಟುಹಬ್ಬ ನಿಮಿತ್ತ ಸಿಡಿಪಿಯೊಂದು ಬಿಡುಗಡೆಯಾಗಿದೆ. ಈ ಸಿಡಿಪಿಯಲ್ಲಿ ನಿಮ್ ಅಪ್ಪನ್ ಹೆಸ್ರು ಉಳಿಸ್ಬಿಟ್ಟೆ ಕಣಯ್ಯ ಎಂಬ ಸಾಲುಗಳನ್ನು ಬರೆಯಲಾಗಿದ್ದು, ಈ ಸಾಲುಗಳು ಈಗ ಟ್ರೆಂಡ್ ಆಗಿದೆ.
ಕಾಟೇರ ಸಿನಿಮಾದಲ್ಲಿ ದರ್ಶನ್ ಅಭಿನಯ ನೋಡಿ ಜನರು ಇದೇ ಮಾತು ಹೇಳಿದ್ದರು. ಇದೀಗ ಅದೇ ಮಾತನ್ನು ಸಿಡಿಪಿಯಲ್ಲೂ ಬರೆಯಲಾಗಿದ್ದು, ಟ್ರೆಂಡ್ ಆಗಿದೆ. ದರ್ಶನ್ ಅವರ ಸೆಲೆಬ್ರಿಟಿ ಸ್ನೇಹಿತರು, ಫ್ಯಾನ್ಸ್ ಈ ಸಿಡಿಪಿಯನ್ನು ಹಂಚಿಕೊಂಡಿದ್ದಾರೆ.