Publish Date: Fri, 09 Feb 2024 (14:30 IST)
Updated Date: Fri, 09 Feb 2024 (14:33 IST)
ಬೆಂಗಳೂರು: ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾದ ಬೆನ್ನಲ್ಲೇ ನಟ ದರ್ಶನ್ ತಮ್ಮ ಸಂಗಡಿಗರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ದರ್ಶನ್ ಮತ್ತು ಸಂಗಡಿಗರು ತಿರುಪತಿಯಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಸನಿಹ ಗಳಿಕೆ ಮಾಡಿತ್ತು. ಈ ಭಾರೀ ಯಶಸ್ಸು ದರ್ಶನ್ ಉತ್ಸಾಹ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಚಿತ್ರಕ್ಕೆ ತಯಾರಿ ನಡೆದಿದೆ.
ಬರ್ತ್ ಡೇಗೆ ಎರಡು ಸಿಗಲಿದೆ ಎರಡು ಸಿನಿಮಾ ಅಪ್ ಡೇಟ್
ದರ್ಶನ್ ಇದೀಗ ಏಕಕಾಲಕ್ಕೆ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಮತ್ತು ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ. ಈ ಎರಡೂ ಸಿನಿಮಾಗಳ ಅಪ್ ಡೇಟ್ ಅವರ ಹುಟ್ಟುಹಬ್ಬದಂದು ಅಂದರೆ ಫೆಬ್ರವರಿ 16 ರಂದು ಸಿಗಲಿದೆ.
ಫೆಬ್ರವರಿ 16 ರಂದು ಡೆವಿಲ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ಸಿನಿಮಾದ ಮುಹೂರ್ತ ಈಗಾಗಲೇ ನೆರವೇರಿದೆ. ಹೀಗಾಗಿ ದರ್ಶನ್ ಮುಂದೆ ಇದೇ ಸಿನಿಮಾವನ್ನು ಮೊದಲು ಕೈಗೆತ್ತಿಕೊಳ್ಳಲಿದ್ದಾರೆ. ಇದರ ಜೊತೆಗೇ ಪ್ರೇಮ್ ನಿರ್ದೇಶನದಲ್ಲಿ ಹೊಸ ಸಿನಿಮಾಗೂ ಅಂದೇ ಚಾಲನೆ ಸಿಗಲಿದೆ. ಈ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಇದರ ಜೊತೆಗೆ ಕಾಟೇರ ಒಟಿಟಿ ಫ್ಲ್ಯಾಟ್ ಫಾರಂ ಜೀ5 ನಲ್ಲಿ ಬಿಡುಗಡೆಯಾಗುತ್ತಿದೆ.
ಈ ಕಾರಣಕ್ಕೆ ಅವರು ಇದೀಗ ಹೊಸ ಸಿನಿಮಾ ಕೆಲಸಕ್ಕೆ ಮುನ್ನ ತಿರುಪತಿ ದೇವಾಲಯಕ್ಕೆ ತಮ್ಮ ಸ್ನೇಹಿತರ ಜೊತೆ ಭೇಟಿ ನೀಡಿದ್ದಾರೆ. ಸದ್ಯಕ್ಕೆ ಅವರ ಸಿನಿಮಾ ಜೀವನ ಉತ್ತುಂಗದಲ್ಲಿದ್ದು, ಅದೇ ಖುಷಿಯಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.
Krishnaveni K
Publish Date: Fri, 09 Feb 2024 (14:30 IST)
Updated Date: Fri, 09 Feb 2024 (14:33 IST)