Select Your Language

Notifications

webdunia
webdunia
webdunia
webdunia

ದರ್ಶನ್ ಬರ್ತ್ ಡೇಗೆ ಮಧ್ಯರಾತ್ರಿ ‘ಡೆವಿಲ್’ ದರ್ಶನ

Darshan

Krishnaveni K

ಬೆಂಗಳೂರು , ಸೋಮವಾರ, 12 ಫೆಬ್ರವರಿ 2024 (13:34 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಈ ಬಾರಿ ಅಭಿಮಾನಿಗಳಿಗೆ ಮತ್ತಷ್ಟು ವಿಶೇಷವಾಗಲಿದೆ. ಇದಕ್ಕೆ ಅವರ ಎರಡು ಸಿನಿಮಾಗಳ ಅಪ್ ಡೇಟ್ ಕಾರಣ.

ಕಾಟೇರ ಯಶಸ್ಸಿನ ಬಳಿಕ ದರ್ಶನ್ ನಟಿಸಲಿರುವ ಸಿನಿಮಾ ಡೆವಿಲ್-ದಿ ಹೀರೋ. ಈ ಸಿನಿಮಾಕ್ಕೆ ಮಿಲನ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಮುಹೂರ್ತ ಈಗಾಗಲೇ ನೆರವೇರಿದೆ. ಕಾಟೇರ ಸಿನಿಮಾ ಮುಗಿಸಿಯೇ ದರ್ಶನ್ ಈ ಸಿನಿಮಾ ಕೈಗೆತ್ತಿಕೊಳ್ಳುವುದೆಂದು ಈ ಮೊದಲೇ ನಿರ್ಧಾರವಾಗಿತ್ತು.

ಹುಟ್ಟುಹಬ್ಬಕ್ಕೆ ಡೆವಿಲ್ ಗಿಫ್ಟ್
ಡೆವಿಲ್-ದಿ ಹೀರೋ ಎನ್ನುವ ದರ್ಶನ್ ಅವರ ಮುಂದಿನ ಸಿನಿಮಾ ಬಗ್ಗೆ ಅವರ ಹುಟ್ಟುಹಬ್ಬದಂದು ಅಪ್ ಡೇಟ್ ಸಿಗಲಿದೆ ಎಂದು ಈಗಾಗಲೇ ಸುಳಿವು ಸಿಕ್ಕಿತ್ತು. ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದ್ದು, 15 ಕ್ಕೆ ಮಧ್ಯ ರಾತ್ರಿ 11.59 ಕ್ಕೆ ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಅನಾವರಣಗೊಳ‍್ಳಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೇ ದರ್ಶನ್ ಅಭಿಮಾನಿಗಳಲ್ಲಿ ಉತ್ಸಾಹ ಮೇರೆ ಮೀರಿದೆ. ಪ್ರತೀ ಬಾರಿಯೂ ದರ್ಶನ್ ಹುಟ್ಟುಹಬ್ಬ ದಿನ ತಮ್ಮ ಸಿನಿಮಾ ಕುರಿತಂತೆ ಯಾವುದಾದರೂ ಒಂದು ಅಪ್ ಡೇಟ್ ಕೊಡುತ್ತಾರೆ. ಈ ಬಾರಿ ಒಂದಲ್ಲ ಎರಡು ಸಿನಿಮಾ ಅಪ್ ಡೇಟ್ ಸಿಗಲಿದೆ. ಡೆವಿಲ್ ಜೊತೆಗೆ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದ ಘೋಷಣೆಯೂ ಇದೇ ದಿನ ಆಗುವ ಸಾಧ‍್ಯತೆಯಿದೆ.

ಹುಟ್ಟಹಬ್ಬ ದಿನ ಕೇಕ್ ಕಟಿಂಗ್ ಮಾಡಲ್ಲ
ದರ್ಶನ್ ಹುಟ್ಟುಹಬ್ಬವೆಂದರೆ ದೂರದ ಊರುಗಳಿಂದ ಅಭಿಮಾನಿಗಳು ಅವರನ್ನು ನೋಡಲೆಂದೇ ಮನೆ ಮುಂದೆ ಬರುತ್ತಾರೆ. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ದರ್ಶನ್‍ ತಮ್ಮ ಹುಟ್ಟುಹಬ್ಬದಂದು ಕೇಕ್ ಬದಲು ದಿನಸಿ ವಸ್ತುಗಳನ್ನು ತರಲು ಅಭಿಮಾನಿಗಳಿಗೆ ಸೂಚಿಸುತ್ತಾರೆ. ಅದನ್ನು ಬಳಿಕ ಕೆಲವು ಅನಾಥಾಶ್ರಮಗಳಿಗೆ ದಾನ ಮಾಡುತ್ತಾರೆ. ಈ ಬಾರಿಯೂ ದರ್ಶನ್ ಅಭಿಮಾನಿಗಳಿಗೆ ನಿಮ್ಮ ಕೈಲಾದ ದಿನಸಿ ವಸ್ತು ತನ್ನಿ. ಅದನ್ನು ಬಡವರಿಗೆ ತಲುಪಿಸುವ ಜವಾಬ್ಧಾರಿ ನನ್ನದು ಎಂದಿದ್ದಾರೆ. ಅದರಂತೆ ಅಭಿಮಾನಿಗಳು ಕೇಕ್, ಹಾರ ತುರಾಯಿಗೆ ಖರ್ಚು ಮಾಡುವ ಬದಲು ದಿನಸಿ ವಸ್ತು ಖರೀದಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಡಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ದುಬಾರಿ ಸಂಭಾವನೆ ಪಡೆಯುವ ನಟ ಯಾರು ಗೊತ್ತಾ?