Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ದುಬಾರಿ ಸಂಭಾವನೆ ಪಡೆಯುವ ನಟ ಯಾರು ಗೊತ್ತಾ?

Sandalwood stars

Krishnaveni K

ಬೆಂಗಳೂರು , ಸೋಮವಾರ, 12 ಫೆಬ್ರವರಿ 2024 (09:00 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಇತ್ತೀಚೆಗೆ ಕೋಟಿಗಳಲ್ಲಿ ಸಂಭಾವನೆ ಜೇಬಿಗಿಳಿಸುತ್ತಿದ್ದು, ಪರಭಾಷಾ ಸಿನಿ ತಾರೆಯರೊಂದಿಗೆ ಸ್ಪರ್ಧೆ ಒಡ್ಡುತ್ತಿದ್ದಾರೆ.

ಕಿಚ್ಚ ಸುದೀಪ್, ರಿಷಬ್ ಶೆಟ್ಟಿ, ಯಶ್, ಉಪೇಂದ್ರ, ರಕ್ಷಿತ್ ಶೆಟ್ಟಿ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಪರಭಾಷಿಕರನ್ನೂ ಗೆದ್ದವರು. ಪರಭಾಷೆಗಳಲ್ಲೂ ಈ ನಟರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವರ ನಡುವೆ ದರ್ಶನ್ ಕೇವಲ ಕನ್ನಡ ಸಿನಿಮಾಗಳಲ್ಲಿಯೇ ನಟಿಸಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದಾರೆ.

ಗರಿಷ್ಠ ಸಂಭಾವನೆ ಯಾರಿಗೆ?
ಕನ್ನಡದ ನಟರ ಪೈಕಿ ಬಹುತೇಕ ಸ್ಟಾರ್ ನಟರ ಸಂಭಾವನೆ 10 ಕೋಟಿ ಮೀರಿದೆ. ಈ ಪೈಕಿ ನಂ.1 ಸ್ಥಾನದಲ್ಲಿರುವವರು ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ 2 ಸಿನಿಮಾಗೆ ಯಶ್ 30 ಕೋಟಿ ಸಂಭಾವನೆ ಪಡೆದಿದ್ದರಂತೆ. ಇದೀಗ ಟಾಕ್ಸಿಕ್ ಸಿನಿಮಾಗೆ ಅವರ ಸಂಭಾವನೆ 100 ಕೋಟಿ ಸನಿಹ ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ಅವರು ನಂ.1 ಹೈಯೆಸ್ಟ್ ಪೇಯ್ಡ್ ನಟ.

ಎರಡನೇ ಸ್ಥಾನದಲ್ಲಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯಿಸಿಕೊಳ್ಳುವ ದರ್ಶನ್ ಒಂದು ಸಿನಿಮಾಗೆ 20 ಕೋಟಿ ರೂ.ವರೆಗೆ ಚಾರ್ಜ್ ಮಾಡುತ್ತಾರಂತೆ. ಮೂರನೇ ಸ್ಥಾನ ಕಿಚ್ಚ ಸುದೀಪ್ ಗೆ. ಅವರು ಒಂದು ಸಿನಿಮಾಗೆ 10 ರಿಂದ 20 ಕೋಟಿಯವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.

ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ರಿಷಬ್ ಶೆಟ್ಟಿ 15 ಕೋಟಿವರೆಗೆ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಿದ್ದರೂ ಟಾಲಿವುಡ್, ಕಾಲಿವುಡ್, ಬಾಲಿವುಡ್ ಗೆ ಹೋಲಿಸಿದರೆ ಈ ಸಂಭಾವನೆ ತೀರಾ ಕಡಿಮೆ ಎಂದೇ ಹೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ವರ್ತೂರು ಸಂತೋಷ್ ಸನ್ಮಾನ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ