Publish Date: Wed, 27 Dec 2023 (09:40 IST)
Updated Date: Wed, 27 Dec 2023 (09:40 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ಅಡ್ವಾನ್ಸ್ ಬುಕಿಂಗ್ ಗೆ ಭರ್ಜರಿ ಬೇಡಿಕೆ ಬಂದಿದೆ.
ಮೊನ್ನೆಯಷ್ಟೇ ಕಾಟೇರ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿತ್ತು. ಮೊದಲ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಹೆಚ್ಚಿನ ಥಿಯೇಟರ್ ಗಳಲ್ಲಿ ಮೊದಲ ದಿನದ ಶೋಗಳು ವೇಗವಾಗಿ ಬುಕಿಂಗ್ ಆಗುತ್ತಿದೆ.
ಮೂಲಗಳ ಪ್ರಕಾರ ಸುಮಾರು 30 ಸಾವಿರ ಟಿಕೆಟ್ ಗಳು ಮಾರಾಟಗೊಂಡಿದೆ. ಇದರಿಂದಾಗಿ ಮೊದಲ ದಿನವೇ ಸಿನಿಮಾ ದಾಖಲೆಯ ಗಳಿಕೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ.
ಕಾಟೇರ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಾಗಿ ಆರಾಧನಾ ನಟಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಮಾಸ್ ಸಿನಿಮಾ ಇಂದಿರಾ ಗಾಂಧಿಯ ಕಾಲಘಟ್ಟದಲ್ಲಿ ನಡೆಯುವ ಕತೆಯಾಗಿದೆ. ಈ ಸಿನಿಮಾ ಡಿಸೆಂಬರ್ 29 ರಂದು ಥಿಯೇಟರ್ ಗಳಲ್ಲಿ ಕಾಟೇರ ರಿಲೀಸ್ ಆಗುತ್ತಿದೆ.