ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಯಾವುದಕ್ಕೂ ಸಿದ್ದ ಎನ್ನುವ ಅಭಿಮಾನಿಗಳಿದ್ದಾರೆ. ಇದೇ ವಾರ ಬಿಡುಗಡೆಯಾಗಲಿರುವ ಕಾಟೇರ ಸಿನಿಮಾಗಾಗಿ ಮೈಸೂರಿನ ರೆಸ್ಟೋರೆಂಟ್ ಒಂದು ಆಫರ್ ನೀಡಿದೆ.
ಡಿಸೆಂಬರ್ 29 ರಂದು ಕಾಟೇರ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಮೈಸೂರಿನ ಪ್ರಶಾಂತ್ ರೆಸ್ಟೋರೆಂಟ್ ಗ್ರಾಹಕರಿಗೆ ಒಂದು ಕೊಂಡರೆ ಒಂದು ಉಚಿತ ಆಫರ್ ನೀಡುತ್ತಿದೆ.
ಕಾಟೇರ ಸಿನಿಮಾ ಸಂಭ್ರಮದ ಹಿನ್ನಲೆಯಲ್ಲಿ ಚಿಕನ್ ಬಿರಿಯಾನಿ, ಚಿಕನ್ ಕಬಾಬ್, ಮಟನ್ ಬಿರಿಯಾನಿ ಸೇರಿದಂತೆ ಬಾಯಲ್ಲಿ ನೀರೂರಿಸುವ ನಾನ್ ವೆಜ್ ಐಟಂಗಳನ್ನು ಒಂದು ಕೊಂಡರೆ ಒಂದು ಉಚಿತ ಆಫರ್ ನೀಡಲಾಗುತ್ತಿದೆ.
ಆದರೆ ಈ ಆಫರ್ ಒಂದು ದಿನ ಮಾತ್ರವಿರಲಿದೆ. ಡಿಸೆಂಬರ್ 27 ರಂದು ಬೆಳಿಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಈ ಉಚಿತ ಆಫರ್ ಜಾರಿಯಲ್ಲಿದೆ. ಗ್ರಾಹಕರು ಇದರ ಲಾಭ ಪಡೆಯಬಹುದು. ಅಭಿಮಾನಿಗಳಿಂದ ಪ್ರೀತಿಯಿಂದ ಡಿ ಬಾಸ್ ಎಂದು ಕರೆಸಿಕೊಳ್ಳುವ ದರ್ಶನ್ ಮೇಲಿನ ಅಭಿಮಾನವನ್ನು ಹೋಟೆಲ್ ಈ ರೀತಿ ತೋರಿಸಿಕೊಳ್ಳುತ್ತಿದೆ.