Publish Date: Tue, 26 Dec 2023 (10:55 IST)
Updated Date: Tue, 26 Dec 2023 (11:03 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಇಷ್ಟು ದಿನ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ವಿನಯ್ ಗೌಡ ಇದ್ದಕ್ಕಿದ್ದಂತೆ ತಣ್ಣಗಾಗಲು ನಿರ್ಧರಿಸಿದ್ದಾರೆ.
ವಿನಯ್ ಗೌಡ ಈ ಸೀಸನ್ ನಲ್ಲಿ ಹಲವಾರು ಬಾರಿ ಅಗ್ರೆಸಿವ್ ವರ್ತನೆಗಳಿಂದಲೇ ವಿವಾದಕ್ಕೀಡಾಗಿದ್ದರು. ಮನೆಯವರೂ ಅವರ ಮೇಲೆ ಸಾಕಷ್ಟು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದೂ ಇದೆ.
ಆದರೆ ವೀಕ್ಷಕರಿಗೂ ವಿನಯ್ ವರ್ತನೆ ಅಸಮಾಧಾನ ತಂದಿತ್ತು. ಕಿಚ್ಚ ಸುದೀಪ್ ಒಮ್ಮೆಯಾದರೂ ಅವರ ವರ್ತನೆಯನ್ನು ಪ್ರಶ್ನಿಸಬೇಕು ಎಂದು ಅಭಿಪ್ರಾಯಪಟ್ಟಿದ್ದೂ ಇದೆ. ಇದೀಗ ಮನೆಗೆ ಈ ವಾರಂತ್ಯದಲ್ಲಿ ಭೇಟಿ ಕೊಟ್ಟಿದ್ದ ಶೈನ್ ಶೆಟ್ಟಿ ವಿನಯ್ ಗೆ ಇದನ್ನು ಸೂಕ್ಷ್ಮವಾಗಿ ಹೇಳಿದ್ದರು. ಅಗ್ರೆಸಿವ್ ಆಗಿದ್ದರೆ ಪರಿಣಾಮ ಸರಿ ಇರಲ್ಲ, ಎಚ್ಚರಿಕೆಯಿಂದ ಆಡಿದರೆ ಉಳಿದುಕೊಳ್ಳಬಹುದು ಎಂದು ಸಂದೇಶ ರವಾನಿಸಿದ್ದರು.
ಹೀಗಾಗಿ ಬಳಿಕ ವಿನಯ್ ನಾನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಗ್ರೆಸಿವ್ ಆಗಿರುವುದಿಲ್ಲ. ಯಾವುದೇ ಕಾರಣಕ್ಕೂ ಪ್ರವೋಕ್ ಆಗಲ್ಲ ಎಂದು ಮನೆಯ ಸದಸ್ಯರಿಗೆ ಹೇಳಿಕೊಂಡಿದ್ದಾರೆ. ಅದನ್ನು ತಮ್ಮ ವರ್ತನೆ ಮೂಲಕವೂ ತೋರಿಸುತ್ತಿದ್ದಾರೆ. ಎಲ್ಲರ ಜೊತೆಗೆ ಚೆನ್ನಾಗಿರಲು ಪ್ರಯತ್ನಿಸುತ್ತಿದ್ದಾರೆ. ಎಲ್ಲವನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಿದ್ದಾರೆ. ಅವರ ಈ ಬದಲಾವಣೆ ಎಷ್ಟು ದಿನ ಕಾದು ನೋಡಬೇಕು.