Publish Date: Sun, 24 Dec 2023 (09:50 IST)
Updated Date: Sun, 24 Dec 2023 (10:16 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಮನೆಯಲ್ಲಿ ಫೋನ್ ಬಳಸಲಾಗುತ್ತಿದೆ ಎಂಬ ಆರೋಪಗಳಿಗೆ ಇದೀಗ ನಿನ್ನೆಯ ಎಪಿಸೋಡ್ ನಲ್ಲಿ ಸ್ಪಷ್ಟನೆ ನೀಡಲಾಗಿದೆ.
ಇತ್ತೀಚೆಗೆ ಚಾರ್ಜರ್ ಮತ್ತು ಅಡಾಪ್ಟರ್ ಇರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಲವರು ಬಿಗ್ ಬಾಸ್ ನಲ್ಲಿ ಫೋನ್ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಆದರೆ ಇದೀಗ ನಿನ್ನೆ ಶ್ರುತಿ ನ್ಯಾಯಾಧೀಶೆಯಾಗಿ ಭಾಗಿಯಾಗಿದ್ದ ಎಪಿಸೋಡ್ ನಲ್ಲಿ ಫೋನ್ ಬಳಕೆ ಆರೋಪದ ಬಗ್ಗೆ ನೇರವಾಗಿ ಕೇಳಿ ಅದಕ್ಕೆ ಸ್ಪರ್ಧಿಗಳಿಂದಲೇ ಸ್ಪಷ್ಟನೆ ಕೊಡಿಸಿದರು.
ನೀವು ಮನೆಯಲ್ಲೇ ಫೋನ್ ಬಳಸುತ್ತಿದ್ದೀರಾ ಎಂದು ಆರೋಪ ಬಂದಿದೆ ಎಂದು ಶ್ರುತಿ ಹೇಳಿದರು. ಬಳಿಕ ಬಿಗ್ ಬಾಸ್ ಗೆ ಮನವಿ ಮಾಡಿ ಆ ಫೋಟೋವನ್ನು ಸ್ಕ್ರೀನ್ ಮೇಲೆ ತೋರಿಸಲು ಹೇಳಿದರು. ಆ ಫೋಟೋ ನೋಡಿ ಮನೆಯವರು ಜೋರಾಗಿ ನಕ್ಕರು. ಮೈಕಲ್ ಮತ್ತು ಮನೆಯವರು ಅದು ಫೋನ್ ಚಾರ್ಜರ್ ಅಲ್ಲ, ಡ್ರೈಯರ್ ಚಾರ್ಜರ್ ಎಂದು ನೇರವಾಗಿ ಆ ಚಾರ್ಜರ್ ಎಲ್ಲರೆದುರು ತೋರಿಸಿ ಸ್ಪಷ್ಟನೆ ನೀಡಿದರು.