`
ಮಂಡ್ಯ: ಕಾಟೇರ ಸಿನಿಮಾದ ರೈ ಗೀತೆ ಲಾಂಚ್ ಮತ್ತು ಪ್ರಿ ರಿಲೀಸ್ ಈವೆಂಟ್ ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ನಿನ್ನೆ ರೈತರ ದಿನವಾಗಿದ್ದರಿಂದ ಇದೇ ವಿಶೇಷ ದಿನದಂದೇ ರೈತ ಗೀತೆ ಬಿಡುಗಡೆ ಮಾಡಲಾಗಿದೆ. ನಟ ದರ್ಶನ್ ಯಾವತ್ತೂ ರೈತರ ಪರವಾಗಿ ಮಾತನಾಡುತ್ತಾರೆ. ಇದೀಗ ಕಾಟೇರ ವೇದಿಕೆಯಲ್ಲೂ ರೈತರ ಪರವಾಗಿ ಮಾತನಾಡಿದ್ದಾರೆ.
ಹಸಿರು ಶಾಲಿನ ಶಕ್ತಿಯ ಅರಿವು ನನಗಿದೆ. ರೈತರಿಗೆ ಅನ್ಯಾಯ ಮಾಡಬೇಡಿ. ಅವರಿಗೆ ಸಿಂಪತಿ ಬೇಕಾಗಿಲ್ಲ. ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಕೊಟ್ಟರೆ ಸಾಕು ಎಂದರು.
ಬಳಿಕ ರೈತರೇ ನಿಮ್ಮ ಬಳಿ ಎಷ್ಟೇ ಭೂಮಿ ಇರಲಿ, ಅದನ್ನು ಮಾರಿಕೊಳ್ಳುವ ಕೆಲಸ ಮಾಡಬೇಡಿ. ಒಳ್ಳೆ ರೇಟು ಕೊಡುತ್ತಾರೆಂದು ಮಾರಿದರೆ ಅಕ್ಕಿ ಬೆಳೆಯಲು, ಗೆಡ್ಡೆ ಗೆಣಸು ಬೆಳೆಯಲು ಸಹ ಜಾಗ ಇರಲ್ಲ. ನ್ಯಾಯವಾದ ಬೆಲೆ ಸಿಕ್ಕರೆ ಪ್ರತಿಯೊಬ್ಬ ರೈತರ ಮನೆಯಲ್ಲೂ ಚಾಪರ್ ಇರುತ್ತದೆ ಎಂದಿದ್ದಾರೆ.