Publish Date: Sat, 23 Dec 2023 (13:20 IST)
Updated Date: Sat, 23 Dec 2023 (13:44 IST)
ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಎರಡನೇ ಪ್ರಿ ರಿಲೀಸ್ ಈವೆಂಟ್ ಇಂದು ಮಂಡ್ಯದಲ್ಲಿ ನಡೆಯಲಿದೆ.
ಇಂದು ರೈತ ದಿನಾಚರಣೆಯ ಅಂಗವಾಗಿ ಚಿತ್ರತಂಡ ಈ ವಿಶೇಷ ಪ್ರಿ ರಿಲೀಸ್ ಈವೆಂಟ್ ಆಯೋಜಿಸಿದೆ. ಕಾಟೇರ ಸಿನಿಮಾದಲ್ಲಿ ರೈತರ ಕುರಿತಾದ ಹಾಡೊಂದು ಸೃಷ್ಟಿಸಲಾಗಿದ್ದು, ಆ ಹಾಡು ಇಂದು ಮಂಡ್ಯ ಜನರ ಮುಂದೆ ಬಿಡುಗಡೆಯಾಗಲಿದೆ. ಇಂದು ರಾತ್ರಿ 8.16 ಕ್ಕೆ ಆನಂದ್ ಅಡಿಯೂ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಡು ಲಾಂಚ್ ಆಗಲಿದೆ.
ಇದಕ್ಕೆ ಮೊದಲು ಚಿತ್ರತಂಡ ಹುಬ್ಬಳ್ಳಿಯಲ್ಲಿ ಪ್ರಿ ರಿಲೀಸ್ ಈವೆಂಟ್ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದ ಟ್ರೈಲರ್ ಲೋಕಾರ್ಪಣೆ ಮಾಡಿದ್ದರು.
ಇದೀಗ ರೈತರಿಗಾಗಿಯೇ ವಿಶೇಷ ಪ್ರಿರಿಲೀಸ್ ಈವೆಂಟ್ ಆಯೋಜನೆ ಮಾಡಲಾಗಿದೆ. ಮಂಡ್ಯದಲ್ಲಿ ಬೃಹತ್ ವೇದಿಕೆಯಲ್ಲಿ ಇಂದು ಕಾರ್ಯಕ್ರಮ ನಡೆಯಲಿದ್ದು, ದರ್ಶನ್ ಸೇರಿದಂತೆ ಚಿತ್ರತಂಡ ಹಾಜರಿರಲಿದೆ.