Select Your Language

Notifications

webdunia
webdunia
webdunia
webdunia

ಬಿಬಿಕೆ10: ವಿನಯ್, ಕಾರ್ತಿಕ್ ಗೆ ಗಾಯ, ಟಾಸ್ಕ್ ಆಡದಂತೆ ಸಲಹೆ

ಬಿಬಿಕೆ10: ವಿನಯ್, ಕಾರ್ತಿಕ್ ಗೆ ಗಾಯ, ಟಾಸ್ಕ್ ಆಡದಂತೆ ಸಲಹೆ
ಬೆಂಗಳೂರು , ಗುರುವಾರ, 21 ಡಿಸೆಂಬರ್ 2023 (13:19 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ವಿನಯ್ ಮತ್ತು ಕಾರ್ತಿಕ್ ಅಗ್ರೆಸಿವ್ ಆಟಕ್ಕೆ ಹೆಸರು ವಾಸಿ. ಆದರೆ ಇದೀಗ ಇಬ್ಬರೂ ಗಾಯಗೊಂಡು ವಿಶ್ರಾಂತಿ ಪಡೆಯುವಂತಾಗಿದೆ.

ಈ ವಾರ ಬಿಗ್ ಬಾಸ್ ಎರಡು ತಂಡಗಳಾಗಿ ಮಾಡಿ ಎದುರಾಳಿ ತಂಡದವರಿಗೆ ನೀಡಲಾದ ಬಟ್ಟೆಗೆ ಕಲೆ ಮಾಡುವ ಮತ್ತು ಆ ತಂಡದವರು ಕಲೆಯಾಗದಂತೆ ರಕ್ಷಿಸುವ ದೈಹಿಕ ಟಾಸ್ಕ್ ನೀಡಿತ್ತು.

ಇಂತಹ ಟಾಸ್ಕ್ ಸಿಕ್ಕರೆ ಕೇಳಬೇಕೇ? ಬಿಗ್ ಬಾಸ್ ನಲ್ಲಿ ಮಾರಾಮಾರಿ ಗ್ಯಾರಂಟಿ. ಈ ವಾರವೂ ಅದೇ ಆಗಿದೆ. ವಿನಯ್ ಮತ್ತು ಕಾರ್ತಿಕ್ ಆಕ್ರಮಣಕಾರಿಯಾಗಿ ಆಡಲು ಹೋಗಿ ಗಾಯ ಮಾಡಿಕೊಂಡಿದ್ದಾರೆ. ವಿನಯ್ ಕೈ ಬೆರಳಿಗೆ ಗಾಯವಾಗಿದ್ದು, ವೈದ್ಯರು ಹೇಳುವವರೆಗೆ ಆಡಬೇಡಿ ಎಂದು ಬಿಗ್ ಬಾಸ್ ಸೂಚನೆ ನೀಡಿದೆ.

ಇನ್ನು, ಕಾರ್ತಿಕ್ ಕೂಡಾ ಟಾಸ್ಕ್ ವೇಳೆ ಬೆನ್ನಿಗೆ ಏಟು ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೂ ವಿಶ್ರಾಂತಿಗೆ ಸೂಚಿಸಲಾಗಿದೆ. ಬಿಗ್ ಬಾಸ್ ಮನೆಯ ಇಬ್ಬರು ಸ್ಟ್ರಾಂಗ್ ಸ್ಪರ್ಧಿಗಳು ಈಗ ಗಾಯಗೊಂಡು ಮೂಲೆ ಸೇರುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನದಾಳವನ್ನು ಬಹಿರಂಗಪಡಿಸಿದ ನಟಿ ಅನುಷ್ಕಾ ಶರ್ಮಾ