ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ನೇಹಿತರಾಗಿದ್ದ ಕಾರ್ತಿಕ್-ಸಂಗೀತಾ ಈಗ ದೂರ ದೂರ ಆಗಿದ್ದಾರೆ.
ಇತ್ತೀಚೆಗೆ ಕಾರ್ತಿಕ್ ಸಂಗೀತಾರನ್ನು ದೂರ ಮಾಡಿ ವಿನಯ್ ಜೊತೆ ಆಪ್ತರಾಗಿದ್ದಾರೆ. ಅತ್ತ ಸಂಗೀತಾ ಬೇರೆ ದಾರಿಯಿಲ್ಲದೇ ಡ್ರೋಣ್ ಪ್ರತಾಪ್ ಗೆ ಹತ್ತಿರವಾಗುತ್ತಿದ್ದಾರೆ.
ಮನೆಗೆ ಕಾಲಿಟ್ಟಾಗ ಕಾರ್ತಿಕ್ ಗೆ ಸಂಗೀತಾರೇ ಜೊತೆಯಾಗಿದ್ದರು. ಆದರೆ ಈಗ ಕಾರ್ತಿಕ್ ಗೆ ಜನಪ್ರಿಯತೆ ಬಂದಿದ್ದು, ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಪಾಪ್ಯುಲಾರಿಟಿ ಬಂದ ಮೇಲೆ ಕಾರ್ತಿಕ್ ಸಂಪೂರ್ಣವಾಗಿ ಬದಲಾಗಿದ್ದಾರೆ. ಸಂಗೀತಾರನ್ನು ಕಡೆಗಣಿಸುತ್ತಿದ್ದಾರೆ ಎಂದು ಫ್ಯಾನ್ಸ್ ಆಕ್ಷೇಪಿಸಿದ್ದಾರೆ.
ಸಂಗೀತಾ ಇಲ್ಲದೇ ಇದ್ದರೆ ಕಾರ್ತಿಕ್ ದೊಡ್ಡ ಜೀರೋ. ಮುಂದಿನ ದಿನಗಳಲ್ಲಿ ವಿನಯ್, ನಮ್ರತಾ ಒದ್ದು ಹೋಗುತ್ತಾರೆ. ಅಗ ಕಾರ್ತಿಕ್ ಗೆ ಸಂಗೀತಾ ಬೆಲೆ ಗೊತ್ತಾಗುತ್ತದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.