Select Your Language

Notifications

webdunia
webdunia
webdunia
webdunia

ತೆರೆ ಮೇಲೂ ಜೋಡಿಯಾಗಲಿದ್ದಾರೆ ಚಂದನ್ ಶೆಟ್ಟಿ-ನಿವೇದಿತಾ ಗೌಡ

ಚಂದನ್ ಶೆಟ್ಟಿ
Photo Courtesy: Instagram
ಬೆಂಗಳೂರು: ಬಿಗ್ ಬಾಸ್ ಶೋ ಖ್ಯಾತಿಯ ನಿವೇದಿತಾ ಗೌಡ ಮತ್ತು ರಾಪರ್ ಚಂದನ್ ಶೆಟ್ಟಿ ದಂಪತಿ ಈಗ ರೀಲ್ ನಲ್ಲೂ ಜೋಡಿಯಾಗುತ್ತಿದ್ದಾರೆ.

ಬಿಗ್ ಬಾಸ್ ನಿಂದ ಪರಿಚಿತರಾದ ಇಬ್ಬರೂ ಕೆಲವು ಸಮಯ ಡೇಟಿಂಗ್ ಮಾಡಿ ಕೊನೆಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಆಗಾಗ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿರುತ್ತಾರೆ.

ಇದೀಗ ಈ ಜೋಡಿ ಬೆಳ್ಳಿ ಪರದೆ ಮೇಲೂ ಜೋಡಿಯಾಗಲಿದ್ದಾರೆ.  ಪುನೀತ್ ಶ್ರೀನಿವಾಸ್ ಕತೆ, ನಿರ್ದೇಶನ ಮಾಡುತ್ತಿರುವ ಥ್ರಿಲ್ಲರ್ ಕತೆಯಿರುವ ಸಿನಿಮಾವೊಂದರಲ್ಲಿ ಇಬ್ಬರೂ ಜೋಡಿಯಾಗಿ ಅಭಿನಯಿಸಲಿದ್ದಾರೆ.

ಪುನೀತ್ ಶ್ರೀನಿವಾಸ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಮುಂದಿನ ತಿಂಗಳು ಚಿತ್ರೀಕರಣ ಆರಂಭಿಸಲಿದ್ದಾರೆ. ಸದ್ಯದಲ್ಲೇ ಟೈಟಲ್ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಲೀಲಾವತಿ ಆಸ್ಪತ್ರೆ ಮುಂದೆ ಪ್ರತಿಮೆ ನಿರ್ಮಿಸಲು ಮುಂದಾದ ಸರ್ಕಾರ