Publish Date: Tue, 05 Dec 2023 (09:50 IST)
Updated Date: Tue, 05 Dec 2023 (09:52 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್ ಮತ್ತೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಸಂಗೀತಾ ಮತ್ತು ವಿನಯ್ ಕೆಲವು ದಿನಗಳಿಂದ ಕೊಂಚ ಸೈಲೆಂಟ್ ಆಗಿದ್ದರು. ಆದರೆ ಈಗ ಮತ್ತೆ ಇಬ್ಬರೂ ಬಿಗ್ ಬಾಸ್ ನೀಡಿದ ಟಾಸ್ಕ್ ನಂತೇ ಮಾತನಾಡುವಾಗ ಪರಸ್ಪರ ಕೆಸರೆರಚಾಟ ಮಾಡಿದ್ದಾರೆ.
ಯಾರು ಋಣಾತ್ಮಕ ಮತ್ತು ಯಾರು ಗುಣಾತ್ಮಕ ವ್ಯಕ್ತಿಗಳು ಎಂದು ಆಯ್ಕೆ ಮಾಡಿ ಅವರಿಗೆ ಗುಲಾಬಿ ನೀಡಲು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಅದರಂತೆ ಮೊದಲು ಸಂಗೀತಾ ಋಣಾತ್ಮಕ ವ್ಯಕ್ತಿಯಾಗಿ ವಿನಯ್ ಅವರನ್ನು ಆಯ್ಕೆ ಮಾಡಿದರು. ವಿನಯ್ ಋಣಾತ್ಮಕ ಬೇರುಗಳ ವ್ಯಕ್ತಿ ಎಂದರು.
ಆ ಬಳಿಕ ವಿನಯ್ ಸರದಿ ಬಂದಾಗ ಸಂಗೀತಾರನ್ನು ಆಯ್ಕೆ ಮಾಡಿದರು. ನಾನು ಋಣಾತ್ಮಕ ಬೇರುಗಳಾಗಿ ಬೆಳೆಯಲು ಕಾರಣವಾದ ಬೀಜವೇ ಸಂಗೀತಾ ಎಂದು ಈ ಹಿಂದೆ ನಡೆದಿದ್ದ ಬಳೆ ವಿವಾದವನ್ನು ನೆನಪಿಸಿದರು. ವಿನಯ್ ಆರೋಪ ಮಾಡುವಾಗ ಸಂಗೀತಾ ಆಕ್ಷೇಪವೆತ್ತಿದ್ದು ಇಬ್ಬರ ನಡುವೆ ಜಗಳವಾಗಿದೆ.
ವಿನಯ್ ಶಟ್ ಅಪ್ ಎಂದರೆ ಸಂಗೀತಾ ಭಾಷೆ ಮೇಲೆ ಹಿಡಿತವಿರಲಿ ಎಂದು ವಿನಯ್ ಗೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.