Select Your Language

Notifications

webdunia
webdunia
webdunia
webdunia

ಬಿಬಿಕೆ10: ಕಿಚ್ಚ ಸುದೀಪ್ ದಯೆಯಿಂದ ಬಚಾವ್ ಆದ ಸ್ಪರ್ಧಿಗಳು

ಬಿಬಿಕೆ10: ಕಿಚ್ಚ ಸುದೀಪ್ ದಯೆಯಿಂದ ಬಚಾವ್ ಆದ ಸ್ಪರ್ಧಿಗಳು
ಬೆಂಗಳೂರು , ಸೋಮವಾರ, 4 ಡಿಸೆಂಬರ್ 2023 (09:58 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ದಯೆ ಸಿಕ್ಕಿದೆ. ಇದರಿಂದಾಗಿ ಸ್ಪರ್ಧಿಗಳು ಎಲಿಮಿನೇಷನ್ ತೂಗುಗತ್ತಿಯಿಂದ ಬಚಾವ್ ಆಗಿದ್ದಾರೆ.

ಈ ವಾರ ಮನೆಯಿಂದ ಹೊರಹೋಗಲು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಘಟಾನುಘಟಿ ಸ್ಪರ್ಧಿಗಳ ಪೈಕಿ ಮೈಕಲ್ ಅಥವಾ ಸ್ನೇಹಿತ್ ಹೊರಹೋಗಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.

ಆದರೆ ಕಿಚ್ಚ ಸುದೀಪ್ ಇದುವರೆಗೆ ಬಳಸಿರದ ವಿಶೇಷ ಅಧಿಕಾರವೊಂದನ್ನು ಬಳಸಿ ಸ್ಪರ್ಧಿಗಳನ್ನು ಈ ವಾರ ಎಲಿಮಿನೇಷನ್ ನಿಂದ ಕಾಪಾಡಿದ್ದಾರೆ. ಹೀಗಾಗಿ ಈ ವಾರ ಯಾವುದೇ ಸ್ಪರ್ಧಿ ಎಲಿಮಿನೇಟ್ ಆಗಿಲ್ಲ.

ಶನಿವಾರದ ಎಪಿಸೋಡ್ ನಲ್ಲಿ ವರ್ತೂರು ಸಂತೋಷ್, ನಮ್ರತಾ, ಡ್ರೋಣ್ ಪ್ರತಾಪ್ ಸೇಫ್ ಆಗಿದ್ದರು. ಭಾನುವಾರ ಮೊದಲು ವಿನಯ್, ಸಂಗೀತಾ, ತನಿಷಾ ಸೇಫ್ ಆದರು. ಕೊನೆಗೆ ಮೈಕಲ್ ಮತ್ತು  ಸ್ನೇಹಿತ್ ಉಳಿದುಕೊಂಡರು. ಆದರೆ ಈ ವಾರ ಇಬ್ಬರೂ ಚೆನ್ನಾಗಿ ಆಡಿದ್ದರಲ್ಲದೆ, ಸ್ನೇಹಿತ್ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದರು. ಹೀಗಾಗಿ ಸುದೀಪ್ ವಿಶೇಷ ಅಧಿಕಾರ ಬಳಸಿ ಇಬ್ಬರನ್ನೂ ಸೇವ್ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

Yash19: ಯಶ್ ಕೊಟ್ಟ ಅಪ್ ಡೇಟ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್