Publish Date: Mon, 04 Dec 2023 (08:59 IST)
Updated Date: Mon, 04 Dec 2023 (08:59 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಕೊಟ್ಟ ಒಂದೇ ಒಂದು ಅಪ್ ಡೇಟ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಶುರುವಾಗಿದೆ.
ಯಶ್ 19 ಸಿನಿಮಾ ಬಗ್ಗೆ ಅಪ್ ಡೇಟ್ ಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದರು. ಆದರೆ ಇದುವರೆಗೆ ಅಪ್ ಡೇಟ್ ಸಿಕ್ಕಿರಲಿಲ್ಲ. ಆದರೆ ಈಗ ಯಶ್ ಇನ್ ಸ್ಟಾ ಪ್ರೊಫೈಲ್ ನಲ್ಲಿ ಲೋಡಿಂಗ್ ಎನ್ನುವ ಫೋಟೋ ಪ್ರಕಟಿಸಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಯಶ್ ಹವಾ ಶುರುವಾಗಿದೆ.
ಯಶ್ ಯಾವಾಗ ಹೊಸ ಸಿನಿಮಾ ಅಪ್ ಡೇಟ್ ಕೊಡಬಹುದು ಎಂಬುದರಿಂದ ಹಿಡಿದು ಅವರ ಮುಂದಿನ ಸಿನಿಮಾಗೆ ಯಾವ ಪ್ರೊಡಕ್ಷನ್ ಹೌಸ್, ಯಾರು ಪ್ರೊಡ್ಯೂಸರ್, ಯಾರು ಡೈರೆಕ್ಟರ್ ಎಂಬಿತ್ಯಾದಿ ಊಹಾಪೋಹಗಳು ಶುರುವಾಗಿದೆ.
ಕೆಲವು ಮೂಲಗಳ ಪ್ರಕಾರ ಕೆವಿಎನ್ ಪ್ರೊಡಕ್ಷನ್ಸ್ ಯಶ್ ಸಿನಿಮಾಗೆ ಬಂಡವಾಳ ಹೂಡಲಿದೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದ ಒಂದು ಫೋಟೋಗೇ ಈ ಪರಿ ಹವಾ ಎಂದರೆ ಅಪ್ ಡೇಟ್ ದಿನ ಯಾವ ಮಟ್ಟಿಗೆ ಹವಾ ಕ್ರಿಯೇಟ್ ಆಗಬಹುದು ನೀವೇ ಊಹಿಸಿ.