Select Your Language

Notifications

webdunia
webdunia
webdunia
webdunia

ಬಿಬಿಕೆ10: ಡ್ರೋಣ್ ಪ್ರತಾಪ್ ನ ಜೈಲಿಗೆ ಕಳಿಸಿದ ಮನೆಯವರು

ಬಿಬಿಕೆ10: ಡ್ರೋಣ್ ಪ್ರತಾಪ್ ನ ಜೈಲಿಗೆ ಕಳಿಸಿದ ಮನೆಯವರು
ಬೆಂಗಳೂರು , ಶುಕ್ರವಾರ, 1 ಡಿಸೆಂಬರ್ 2023 (11:20 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಕಳಪೆ ಹಣೆಪಟ್ಟಿ ಹೊತ್ತು ಡ್ರೋಣ್ ಪ್ರತಾಪ್ ಬಿಗ್ ಬಾಸ್ ಜೈಲು ಸೇರಿದ್ದಾರೆ.

ಈ ವಾರದ ಟಾಸ್ಕ್ ನಲ್ಲಿ ಕಳಪೆ ಯಾರು ಎಂಬ ಪ್ರಶ್ನೆಗೆ ಮನೆಯವರೆಲ್ಲರೂ ಒಕ್ಕೊರಲಿನಿಂದ ಡ್ರೋಣ್ ಪ್ರತಾಪ್ ಹೆಸರು ಸೂಚಿಸಿದ್ದಾರೆ. ಇದಕ್ಕೆ ಎಲ್ಲರೂ ತಮ್ಮದೇ ಆದ ಕಾರಣ  ನೀಡಿದ್ದಾರೆ. ಆದರೆ ಮನೆಯರ ತೀರ್ಪಿನ ಬಗ್ಗೆ ಸಹಮತವಿಲ್ಲ ಎಂದು ಪ್ರತಾಪ್ ಹೇಳಿದ್ದಾರೆ.

ಹಾಗಿದ್ದರೂ ನಿಯಮದ ಪ್ರಕಾರ ಅವರೇ ಈ  ವಾರ ಕಳಪೆ ಹಣೆಪಟ್ಟಿ ಹೊತ್ತು ಜೈಲು ಸೇರಬೇಕಾಗಿದೆ. ಡ್ರೋಣ್ ಪ್ರತಾಪ್ ಮಾಡಿದ ಕೆಲವು ತಪ್ಪುಗಳಿಂದಾಗಿ ಈ ವಾರ ಅವರ ತಂಡಕ್ಕೆ ನಷ್ಟವಾಗಿತ್ತು. ಹೀಗಾಗಿ ಎಲ್ಲರೂ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಬಂದಾಗಿನಿಂದ ಡ್ರೋಣ್ ಪ್ರತಾಪ್ ಜನರ ಮನಸ್ಸಿನಲ್ಲಿ  ನೆಲೆಯೂರಲು ಯಶಸ್ವಿಯಾಗಿದ್ದಾರೆ. ಆದರೆ ಈ ವಾರ ವೀಕ್ಷಕರಿಗೂ ಪ್ರತಾಪ್ ಆಟ ಅಷ್ಟೊಂದು ಇಷ್ಟವಾದಂತೆ ತೋರುತ್ತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

R Subbalakshmi: ಮಲಯಾಳಂ ಸಿನಿಮಾದ ಅಜ್ಜಿ, ನಟಿ ಆರ್. ಸುಬ್ಬಲಕ್ಷ್ಮಿ ಇನ್ನಿಲ್ಲ