Select Your Language

Notifications

webdunia
webdunia
webdunia
webdunia

ಬಿಬಿಕೆ10: ಕ್ಯಾಪ್ಟನ್ ಆದ್ರೂ ಎಲಿಮಿನೇಟ್ ಆಗಿ ಹೊಸ ದಾಖಲೆ ಮಾಡಿದ ನೀತೂ

ಬಿಬಿಕೆ10: ಕ್ಯಾಪ್ಟನ್ ಆದ್ರೂ ಎಲಿಮಿನೇಟ್ ಆಗಿ ಹೊಸ ದಾಖಲೆ ಮಾಡಿದ ನೀತೂ
ಬೆಂಗಳೂರು , ಸೋಮವಾರ, 27 ನವೆಂಬರ್ 2023 (10:20 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಕ್ಯಾಪ್ಟನ್ ನೀತೂ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗಿದ್ದಾರೆ. ಈ ಮೂಲಕ ನೀತೂ ಹೊಸ ದಾಖಲೆ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾಮಾನ್ಯವಾಗಿ ಕ್ಯಾಪ್ಟನ್ ಆದವರಿಗೆ ಎಲಿಮಿನೇಷನ್ ನಿಂದ ವಿನಾಯ್ತಿ ಸಿಗುತ್ತದೆ. ಆದರೆ ಈ ಬಾರಿ ಬಿಗ್ ಬಾಸ್ ಆ ಸಂಪ್ರದಾಯವನ್ನೂ ಮುರಿದಿದೆ.

ಏಳನೇ ವಾರ ಮನೆಯಿಂದ ಕ್ಯಾಪ್ಟನ್ ಆಗಿರುವ ನೀತೂ ಎಲಿಮಿನೇಟ್ ಆಗಿ ಹೋಗಿದ್ದಾರೆ. ಅವರು ಈ ಮನೆಯಿಂದ ಹೊರಹೋಗಬಹುದು ಎಂದು ವೀಕ್ಷಕರು ನಿರೀಕ್ಷಿಸಿದ್ದರು. ಆದರೆ ಕ್ಯಾಪ್ಟನ್ ಆಗಿದ್ದರಿಂದ ವಿನಾಯ್ತಿ ಪಡೆಯಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಆ ಎಲ್ಲಾ ನಿರೀಕ್ಷೆಗಳನ್ನೂ ಮೀರಿ ನೀತು ಮನೆಯಿಂದ ಹೊರಬಿದ್ದಿದ್ದಾರೆ. ತೃತೀಯ ಲಿಂಗಿಯಾಗಿ ಏನೆಲ್ಲಾ ಸಾಧನೆ ಮಾಡಬುದು ಎಂದು ತೋರಿಸಿಕೊಟ್ಟ ನೀತೂ ವನಜಾಕ್ಷಿ ಈ ಮೂಲಕ ಬಿಗ್ ಬಾಸ್ ‍ಪ್ರಯಾಣ ಮುಗಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ 10: 50 ನೇ ದಿನಕ್ಕೆ ಮನೆಗೆ ಎಂಟ್ರಿ ಕೊಟ್ಟ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಯಾರು?